ಮುಂಬೈ, ಜು 31(DaijiworldNews/HR): ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ದಂಪತಿ ಇತ್ತೀಚೆಗಷ್ಟೆ ಫ್ಯಾಷನ್ ಶೋನಲ್ಲಿ ಭಾಗಿಯಾಗಿದ್ದು, ಈ ಜೋಡಿಯ ರೊಮ್ಯಾಂಟಿಕ್ ರ್ಯಾಂಪ್ ವಾಕ್ ಸಖತ್ ವೈರಲ್ ಆಗುತ್ತಿದೆ.
ರಣವೀರ್ ಸಿಂಗ್ ಮತ್ತು ದೀಪಿಕಾ ಖ್ಯಾತ ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ 2022ನೇ ಮಿಜ್ವಾನ್ ಫ್ಯಾಷನ್ ಶೋನಲ್ಲಿ ಭಾಗಿಯಾಗಿದ್ದು, ಈ ಜೋಡಿಗಳ ವಾಕ್ ಎಲ್ಲರ ಗಮನ ಸೆಳೆದಿದೆ.
ಇನ್ನುರಣವೀರ್ ಸಿಂಗ್ ಗ್ರ್ಯಾಂಡ್ ಶೇರ್ವಾನಿಯಲ್ಲಿ ಮಿಂಚಿದ್ರೆ ನಟಿ ದೀಪಿಕಾ ಲೆಹಂಗಾದಲ್ಲಿ ಕಾಣಿಸಿಕೊಂಡಿದ್ದು, ಇಬ್ಬರ ರೊಮ್ಯಾಂಟಿಕ್ ರ್ಯಾಂಪ್ ವಾಕ್ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.