ಮುಂಬೈ, ಜು 27 (DaijiworldNews/HR): 'ಭಾಗಿ 2' ಸಿನಿಮಾದ ಜೋಡಿ ಟೈಗರ್ ಶ್ರಾಫ್ ಮತ್ತು ದಿಶಾ ಪಠಾಣಿ ಡೇಟಿಂಗ್ನಲ್ಲಿದ್ದು, ಇದೀಗ ಲವ್ ಸ್ಟೋರಿಗೆ ಫುಲ್ ಸ್ಟಾಪ್ ಇಟ್ಟು ನಾನೊಂದು ತೀರ ನೀನೊಂದು ತೀರ ಎನ್ನುತ್ತಿದ್ದಾರೆ.
ಟೈಗರ್ ಮತ್ತು ದಿಶಾಗೆ 'ಭಾಗಿ 2' ಸಿನಿಮಾದ ಮೂಲಕ ಸಿನಿಪ್ರೇಕ್ಷಕರ ಮನಗೆದಿದ್ದು, ನಂತರ 6 ವರ್ಷಗಳ ಸುದೀರ್ಫವಾಗಿ ಡೇಟಿಂಗ್ ಮಾಡ್ತಿದ್ದರು. ಈಗ ಈ ಜೋಡಿ ದೂರ ದೂರ ಆಗಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಇನ್ನು ಈ ಜೋಡಿ ಬಹಳ ಸಮಯದಿಂದ ಬೇರೆಯಾಗಿದ್ದು, ಬ್ರೇಕಪ್ ಕುರಿತು ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ ಟೈಗರ್ ಮತ್ತು ದಿಶಾ ಅವರ ದಾರಿ ಬೇರೆ ಬೇರೆಯಾಗಿದೆ ಎನ್ನಲಾಗುತ್ತಿದೆ.