ನವದೆಹಲಿ, ಜು 22 (DaijiworldNews/HR): ನವದೆಹಲಿಯಲ್ಲಿ ಇಂದು 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಸಂಚಾರಿ ವಿಜಯ್ ನಟನೆಯ 'ತಲೆದಂಡ' ಮತ್ತು ಸಾಗರ್ ಪುರಾಣಿಕ್ ನಿರ್ದೇಶನದ, ಪವನ್ ಒಡೆಯರ್ ನಿರ್ಮಾಣದ ಡೊಳ್ಳು ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ.
ಅತ್ಯುತ್ತಮ ಪರಿಸರ ಕಾಳಜಿ ಚಿತ್ರವಾಗಿ ಕೃಪಾಕರ್ ನಿರ್ದೇಶನದ, ಸಂಚಾರಿ ವಿಜಯ್ ನಟನೆಯ 'ತಲೆದಂಡ; ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ ದೊರೆತರೆ, ಲೋಕೇಷನ್ ಸೌಂಡ್ ಡಿಸೈನಿಂಗ್ ವಿಭಾಗದಲ್ಲಿ ಡೊಳ್ಳು ಸಿನಿಮಾ ಪ್ರಶಸ್ತಿ ಪಡೆದುಕೊಂಡಿದ್ದು, ಗಿರೀಶ್ ಕಾಸರವಳ್ಳಿ ನಿರ್ದೇಶನದ, ವಾರ್ತಾ ಇಲಾಖೆ ನಿರ್ಮಿಸಿರುವ ಡಾ.ಪಿ.ಟಿ ವೆಂಕೇಶ್ ಕುಮಾರ್ ಬದುಕಿನ 'ನಾದದ ನವನೀತ' ಸಿನಿಮಾಗೂ ರಾಷ್ಟ್ರೀಯ ಪ್ರಶಸ್ತಿ ಸಂದಿದ್ದು, ಅತ್ಯುತ್ತಮ ಪ್ರಾದೇಶಿಕ ತುಳು ಸಿನಿಮಾ ಪ್ರಶಸ್ತಿಯು ಸಂತೋಷ್ ನಿರ್ದೇಶನದ 'ಜೀಟಿಗೆ ಪಾಲಾಗಿದೆ.
ಅತ್ಯುತ್ತಮ ಪರಿಸರ ಕಾಳಜಿ ಚಿತ್ರ - ತಲೆದಂಡ
ಅತ್ಯುತ್ತಮ ಲೋಕೆಷನ್ ಸೌಂಡ್ ಡಿಸೈನ್ ಚಿತ್ರ - ಡೊಳ್ಳು
ಅತ್ಯುತ್ತಮ ಕಲೆ ಮತ್ತು ಸಾಂಸ್ಕೃತಿಕ ಚಿತ್ರ - ನಾದದ ನವನೀತ
ಅತ್ಯುತ್ತಮ ಪ್ರಾದೇಶಿಕ ಸಿನಿಮಾ - ಡೊಳ್ಳು
ಅತ್ಯುತ್ತಮ ಪ್ರಾದೇಶಿಕ ತುಳು ಸಿನಿಮಾ - ಜೀಟಿಗೆ