ಮುಂಬೈ, ಜು 20 (DaijiworldNews/HR): ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತೆ ಈಗ ತಾಯಿಯಾಗಿದ್ದಾರೆ ಎಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದ್ದು, ಇದೀಗ ಈ ಸುದ್ದಿಗೆ ಕರೀನಾ ಪ್ರತಿಕ್ರಿಯಿಸಿದ್ದಾರೆ.
ನಟಿಯ ಇತ್ತೀಚಿನ ಫೋಟೋ ಗಮನಿಸಿರುವ ಅಭಿಮಾನಿಗಳು ನೀವು ಮತ್ತೆ ತಾಯಿಯಾಗಿದ್ದೀರಾ ಅಂತಾ ಪ್ರಶ್ನಿಸಿದ್ದು, ಈ ಸುದ್ದಿಗೆ ಕರೀನಾ ರಿಯಾಕ್ಟ್ ಮಾಡಿರುವ ಅವರು, ಸೈಫ್ ಅವರು ಈಗಾಗಲೇ ನಮ್ಮ ದೇಶದ ಜನ ಸಂಖ್ಯೆಗೆ ತುಂಬಾ ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ನಾನು ಗರ್ಭಿಣಿಯಾಗಿಲ್ಲ ಉಫ್, ಸೈಫ್ ಅವರು ಈಗಾಗಲೇ ನಮ್ಮ ದೇಶದ ಜನ ಸಂಖ್ಯೆಗೆ ತುಂಬಾ ಕೊಡುಗೆ ನೀಡಿದ್ದಾರೆ ಎಂದು ಹೇಳುವ ಮೂಲಕ ತಾವು ಮತ್ತೆ ಗರ್ಭಿಣಿಯಲ್ಲ ಎಂದು ತಿಳಿಸಿದ್ದಾರೆ.