ಬೆಂಗಳೂರು, ಜು 19 (DaijiworldNews/HR): ಖ್ಯಾತ ನಟಿ ನಿತ್ಯಾ ಮೆನನ್ ಅವರು ಸ್ಟಾರ್ ನಟರೊಬ್ಬರೊಂದಿಗೆ ಹಸೆಮಣೆ ಏರುವುದಕ್ಕೆ ಸಜ್ಜಾಗಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದ್ದು, ಅಭಿಮಾನಿಗಳಲ್ಲಿ ಅನೇಕ ಪ್ರಶ್ನೆಗಳು ಮೂಡಿದೆ.
ಬಹುದಿನಗಳ ಗೆಳೆಯ ಮತ್ತು ಸ್ಟಾರ್ ನಟನೂ ಆಗಿರುವ ಮಲಯಾಳಂ ಕಲಾವಿದನ ಜೊತೆ ನಿತ್ಯಾ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಸ್ಟಾರ್ ನಟ ಅಂದರೆ ಯಾರು? ಎನ್ನುವ ಪ್ರಶ್ನೆಗೆ ನಿತ್ಯಾ ಮೆನನ್ ಅವರೇ ಉತ್ತರಿಸಬೇಕಿದೆ.
ಇನ್ನು ನಿತ್ಯಾ ಯಾರನ್ನು ಮದುವೆಯಾಗಲಿದ್ದಾರೆ, ಅವರೊಂದಿಗೆ ಕೆಲಸ ಮಾಡಿದ್ದಾರಾ? ಸ್ಟಾರ್ ನಟ ಅಂದರೆ ಯಾರು? ಯಾಕೆ ಈವರೆಗೂ ಇಬ್ಬರ ಮಧ್ಯೆ ಗಾಸಿಪ್ ಹುಟ್ಟುಕೊಂಡಿಲ್ಲ? ಹೀಗೆ ಅನೇಕ ಪ್ರಶ್ನೆಗಳು ಚಂದನವನದಲ್ಲಿ ಕೇಳಿ ಬರುತ್ತಿವೆ.