ಮುಂಬೈ, ಜು 16 (DaijiworldNews/MS): ನಟಿ ಸೋನಂ ಕಪೂರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಬೇಬಿ ಬಂಪ್ನ ಫೊಟೊಶೂಟ್ ಮಾಡಿಸಿಕೊಂಡಿದ್ದ ನಟಿ ಸೋನಂಗಾಗಿ ಕಪೂರ್ ಕುಟುಂಬ ಜುಲೈ 17 ರಂದು ಅದ್ದೂರಿ ಸೀಮಂತಾ ಕಾರ್ಯಕ್ರಮ ಆಯೋಜಿಸಿತ್ತು. ಆದರೆ ಕೊನೆ ಕ್ಷಣದಲ್ಲಿ ಕುಟುಂಬಸ್ಥರು ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಕಾರಣ ಮುಂಬೈನಲ್ಲಿ ಹೆಚ್ಚುತ್ತಿರುವ ಕೊರೊನಾ. ಕೋವಿಡ್ 19 ಪ್ರಕರಣಗಳ ನಡುವೆ ಯಾವುದೇ ಅಪಾಯವನ್ನು ಆಹ್ವಾನಿಸಲು ತಾವು ಬಯಸುವುದಿಲ್ಲ ಎಂದಿರುವ ಕಪೂರ್ ಕುಟುಂಬ ಸೀಮಂತಾ ಕಾರ್ಯಕ್ರಮವನ್ನೇ ರದ್ದುಗೊಳಿಸಿದೆ.
ಪತಿ ಆನಂದ್ ಅಹುಜಾ ಅವರೊಂದಿಗೆ ಲಂಡನ್ ನಲ್ಲಿ ನೆಲೆಸಿದ್ದ ಪತಿ ಆನಂದ್ ಅಹುಜಾ ಇತ್ತೀಚೆಗೆ ತಾನೇ ಮುಂಬೈಗೆ ಮರಳಿದ್ದರು.
ಬ್ರಾಂದ್ರದಲ್ಲಿರುವ ಕವಿತಾ ಸಿಂಗ್ ಅವರ ಬಂಗಲೆಯಲ್ಲಿ ಈ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಈಗ ಹೆಚ್ಚುತ್ತಿರುವ ಕರೋನಾ ಪ್ರಕರಣಗಳು ಕುಟುಂಬದ ಆತಂಕವನ್ನು ಹೆಚ್ಚಿಸಿದೆ . ಮತ್ತೊಂದೆಡೆ, ಸೋನಮ್ ಕಪೂರ್ ಕೂಡ ತನ್ನ ಮುಂಬರುವ ಮಗುವಿನ ಬಗ್ಗೆ ಯಾವುದೇ ನಿರ್ಲಕ್ಷ್ಯವನ್ನು ವಹಿಸದೇ ಕಾರ್ಯಕ್ರಮ ರದ್ದುಗೊಳಿಸುವುದೇ ಸೂಕ್ತ ಎಂದು ನಿರ್ಧಾರ ತೆಗೆದುಕೊಂಡಿದ್ದಾರೆ.
ಅನಿಲ್ ಕಪೂರ್ ಮತ್ತು ಸುನೀತಾ ಕಪೂರ್ ಈ ಪಾರ್ಟಿಯನ್ನು ಆಯೋಜಿಸಿದ್ದು ಹಲವು ಬಾಲಿವುಡ್ ತಾರೆಯರಿಗೆ ಆಹ್ವಾನವನ್ನೂ ಕಳುಹಿಸಲಾಗಿತ್ತು. ದೀಪಿಕಾ ಪಡುಕೋಣೆ, ಆಲಿಯಾ ಭಟ್, ಮಲೈಕಾ ಅರೋರಾ, ಕರೀನಾ ಕಪೂರ್, ಸ್ವರಾ ಭಾಸ್ಕರ್, ಜಾಕ್ವೆಲಿನ್ ಫರ್ನಾಂಡೀಸ್ ಸೇರಿದಂತೆ ಎಲ್ಲಾ ದೊಡ್ಡ ನಟಿಯರಿಗೂ ಆಹ್ವಾನ ನೀಡಲಾಗಿತ್ತು.