ಮುಂಬೈ, ಜು 13(DaijiworldNews/MS): ಬಾಲಿವುಡ್ನ ಖ್ಯಾತ ನಿರೂಪಕಿ, ಹಾಸ್ಯ ನಟಿ ಭಾರತಿ ಸಿಂಗ್ - ಹರ್ಷ್ ಲಿಂಬಾಚಿಯಾ ದಂಪತಿ ಸಾಮಾಜಿಕ ಜಾಲತಾಣದ ಮೂಲಕ ಮುದ್ದು ಮಗನನ್ನು ಪರಚಯಿಸಿದ್ದಾರೆ.
ರಿಯಾಲಿಟಿ ಹಾಗೂ ಟಾಕ್ ಶೋಗಳಲ್ಲಿ ಬ್ಯುಸಿಯಾಗಿರುವ ಭಾರತಿ ಸಿಂಗ್ 2017ರಲ್ಲಿ ಹಾರ್ಷ್ ಲಿಂಬಾಚಿಯಾರನ್ನು ವಿವಾಹವಾಗಿದ್ದರು. ಇಬ್ಬರದ್ದು ಏಳು ವರ್ಷದ ಪ್ರೀತಿ. ರಿಯಾಲಿಟಿ ಶೋ ಒಂದರಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಮೊದಲು ಸ್ನೇಹಿತರಾಗಿದ್ದವರು ನಂತರ ಪ್ರೀತಿಗೆ ತಿರುಗಿತ್ತು. ಸ್ವತ: ಹಾರ್ಷ್ ನಿರೂಪಕಿ ಹಾಗೂ ಕಾಮಿಡಿಯನ್ ಆಗಿ ಜನಪ್ರಿಯರಾಗಿದ್ದ ಭಾರತಿಗೆ ಪ್ರಪೋಸ್ ಮಾಡಿದ್ದರಂತೆ
ಈಗ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ. ಏಪ್ರಿಲ್ನಲ್ಲಿ ಭಾರತಿ ಸಿಂಗ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈಗ ಚೆಂದದ ಫೋಟೋಶೂಟ್ ಮೂಲಕ ಮಗನನ್ನು ಈ ಜೋಡಿ ಪರಿಚಯಿಸಿದ್ದಾರೆ. ಅಂದಹಾಗೆ ಭಾರತಿ ಸಿಂಗ್ ದಂಪತಿಯ ಮುದ್ದಾದ ಮಗುವಿಗೆ ಲಕ್ಷ್ ಎಂದು ನಾಮಕರಣ ಮಾಡಿದ್ದಾರೆ. ಸದ್ಯ ಮಗ ಲಕ್ಷ್ ಫೋಟೋಗೆ ಅಭಿಮಾನಿಗಳು ಮತ್ತು ಸಿನಿ ರಂಗದ ಸ್ನೇಹಿತರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ ಈ ಫೋಟೋಗಳ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.