ಮುಂಬೈ, ಜೂ 30 (DaijiworldNews/HR): ಕಾರ್ಟಿಯರ್ನ ಬ್ಯೂಟೆಸ್ ಡಿ ಮಾಂಡೆಗೆ ದೀಪಿಕಾ ಪಡುಕೋಣೆ ಹಾಜರಾಗಿದ್ದು, ಈ ವೇಳೆ ಅವರು ಧರಿಸಿರುವ ಬಟ್ಟೆ ಹಾಗೂ ಆಭರಣ ಸಖತ್ ವೈರಲ್ ಆಗಿದೆ.
ದೀಪಿಕಾ ಪಡುಕೋಣೆ ಈ ವರ್ಷದ ಆರಂಭದಲ್ಲಿ ಲೂಯಿ ವಿಟಾನ್ ಅವರ ಮೊದಲ ಭಾರತೀಯ ರಾಯಭಾರಿಯಾಗಿ ನೇಮಕಗೊಂಡಿದ್ದು, ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ತೀರ್ಪುಗಾರರ ಭಾಗವಾದ ನಂತರ, ನಟಿ ಮ್ಯಾಡ್ರಿಡ್ನಲ್ಲಿ ಕಾರ್ಟಿಯರ್ನ ಬ್ಯೂಟೆಸ್ ಡು ಮಾಂಡೆ ಹೈ-ಎಂಡ್ ಆಭರಣ ಸಂಗ್ರಹದ ಬಿಡುಗಡೆಗೆ ಹಾಜರಾಗಿದ್ದು ಈ ವೇಳೆ ತೆಗೆದಿರುವ ಪೋಟೋವನ್ನು ಹಂಚಿಕೊಂಡಿದ್ದಾರೆ.
ಇನ್ನು ನೆಕ್ಪೀಸ್ನೊಂದಿಗೆ ಜೋಡಿಸಲಾದ ಬಿಳಿ ಗೌನ್ನಲ್ಲಿ ದೀಪಿಕಾ ಸುಂದರವಾಗಿ ಕಾಣುತ್ತಿದ್ದು, ನಟಿ ಲಂಡನ್ ಮೂಲದ ಫ್ಯಾಷನ್ ಡಿಸೈನರ್ ಮಾನ್ಸೂರಿ ಅವರ ಐವರಿ ಸಿಲ್ಕ್ ಗೌನ್ ಧರಿಸಿದ್ದರು.