ಮುಂಬೈ, ಜೂ 28 (DaijiworldNews/HR): ತಾನು ಮಗುವಿನ ನಿರೀಕ್ಷೆಯಲ್ಲಿದ್ದೇನೆ ಎಂದು ನಿನ್ನೆಯಷ್ಟೇ ಬಹಿರಂಗಪಡಿಸುವ ಆಲಿಯಾ ಭಟ್ ಇದೀಗ ಮತ್ತೊಂದು ಬೇಡಿಕೆಯನ್ನು ಪತಿ ರಣಬೀರ್ ಕಪೂರ್ ಮುಂದೆ ಇಟ್ಟಿದ್ದಾರೆ.
ಆಲಿಯಾ ಭಟ್ ತಮಗೆ ಎರಡು ಗಂಡು ಮಕ್ಕಳು ಬೇಕು ಎನ್ನುವ ಆಸೆಯನ್ನು ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ.
ಇನ್ನು ನಟಿ ಅಲಿಯಾ ಆಸ್ಪತ್ರೆಯಲ್ಲಿ ಅಲ್ಟ್ರಾಸೌಂಡ್ ಮಾಡುತ್ತಿರುವ ಚಿತ್ರವನ್ನು ನಿನ್ನೆ ಪೋಸ್ಟ್ ಮಾಡಿ ಮಗು 'ಶೀಘ್ರದಲ್ಲೇ ಬರಲಿದೆ' ಎಂದು ಖಚಿತಪಡಿಸಿದ್ದಾರೆ.
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅಲಿಯಾ ಭಟ್ ಮತ್ತು ರಣಬೀರ್ ಜೋಡಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.
ಏಪ್ರಿಲ್ 14ರಂದು ಖ್ಯಾತ ನಟ ರಣಬೀರ್ ಜೊತೆ ಹಸೆಮಣೆ ಏರಿದ್ದ ನಟಿ ಅಲಿಯಾ ಭಟ್ ಗರ್ಭಣಿ ಆಗಿರುವ ಸಿಹಿ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ತೂ ಚರ್ಚೆ ಮಾಡಿದ್ದಾರೆ ಅನ್ನುವ ಸುದ್ದಿ ಅವರ ಆಪ್ತರಿಂದ ಬಹಿರಂಗವಾಗಿದೆ. ಒಟ್ಟಿನಲ್ಲಿ ಮಗುವಿನ ಬಗ್ಗೆ ಈ ದಂಪತಿ ತುಂಬಾ ಕನಸು ಕಟ್ಟಿಕೊಂಡಿರುವುದು ಸ್ಪಷ್ಟವಾಗಿದೆ.