ಮುಂಬೈ, ಜೂ 26 (DaijiworldNews/DB): ಬಾಲಿವುಡ್ನ ಸ್ಟಾರ್ ನಟಿಯರ ಮಕ್ಕಳ ಪೈಕಿ ನಟಿ ಜಾಹ್ನವಿ ಕಪೂರ್ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಸ್ಟಾರ್ ನಟಿ ಶ್ರೀದೇವಿ ಮತ್ತು ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿ ಜಾಹ್ನವಿ ಕಪೂರ್ ಇದೀಗ ಮದುವೆಯಾಗುವ ಹುಡುಗನ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
ಅರೆ! ಜಾಹ್ನವಿಗೆ ಮದುವೆ ಫಿಕ್ಸ್ ಆಯಿತಾ ಎಂದುಕೊಳ್ಳಬೇಡಿ. ಆಕೆ ತಮ್ಮನ್ನು ಮದುವೆಯಾಗುವ ಹುಡುಗ ಹೇಗಿರಬೇಕು ಎಂಬುದನ್ನು ಮುಕ್ತವಾಗಿ ಹಂಚಿಕೊಂಡಿದ್ದಾರಷ್ಟೇ. ಹೌದು. ಸಂದರ್ಶನವೊಂದರಲ್ಲಿ ನಟಿ ಜಾಹ್ನವಿ ಕಪೂರ್ ತಾವು ಮದುವೆಯಾಗಲಿರುವ ಹುಡುಗನಲ್ಲಿ ಎಂತ ಗುಣಗಳಿರಬೇಕೆಂದು ಹೇಳಿಕೊಂಡಿದ್ದಾರೆ. ಜಾಹ್ನವಿ ಮನದರಸನಿಗೆ ಮೊತ್ತಮೊದಲನೆಯದಾಗಿ ಸೆನ್ಸ್ ಆಫ್ ಹ್ಯೂಮರ್ ಇರಬೇಕಂತೆ. ಯಾವಾಗಲೂ ನಗಿಸುತ್ತಲೇ ಇರುವ ಕಾಮಿಡಿ ಮಾಡುವ ಹುಡುಗ ಜಾಹ್ನವಿಗೆ ಬೇಕಂತೆ. ಅಲ್ಲದೆ ಸದಾ ಹೊಸತನ್ನು ಕಲಿಸುವ, ಹುರಿದುಂಬಿಸುವ ಗುಣಗಳಿರುವ ಹುಡುಗನೇ ನನಗಿಷ್ಟ ಎನ್ನುತ್ತಾರೆ ಜಾಹ್ನವಿ.
. 2018ರಲ್ಲಿ 'ಧಡಕ್' ಸಿನಿಮಾ ಮೂಲಕ ಬಾಲಿವುಡ್ಗೆ ಕಾಲಿಟ್ಟ ಜಾಹ್ನವಿ ಈವರೆಗೆ 'ಗುಂಜನ್ ಸಕ್ಸೇನಾ', 'ಕಾರ್ಗಿಲ್ ಗರ್ಲ್' ಮತ್ತು 'ಘೋಸ್ಟ್ ಸ್ಟೋರೀಸ್'ನಂತಹ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ತಾಯಿಯಂತೆ ಅವರಿಗೆ ಇನ್ನೂ ಕೂಡಾ ದೊಡ್ಡ ಮಟ್ಟದ ಸ್ಟಾರ್ಗಿರಿ ಒಲಿದು ಬಂದಿಲ್ಲ. ಸೂಪರ್ ಹಿಟ್ ಸಿನೆಮಾಗಳನ್ನು ಇನ್ನೂ ಜಾಹ್ನವಿ ಅಭಿಮಾನಿಗಳಿಗೆ ನೀಡಿಲ್ಲ, ಸದ್ಯ 'ಗುಡ್ ಲಕ್ ಜೆರ್ರಿ', 'ಮಿಲಿ', 'ಬಾವಲ್', 'ಮಿಸ್ಟರ್ ಅಂಡ್ ಮಿಸ್ ಮಹಿ' ಮುಂತಾದ ಚಿತ್ರಗಳಲ್ಲಿ ಜಾಹ್ನವಿ ನಟಿಸುತ್ತಿದ್ದಾರೆ. ಈ ಚಿತ್ರಗಳಲ್ಲಿ ಅವರಿಗೆ ಇನ್ನಷ್ಟು ಅದೃಷ್ಟ ಒಲಿದು ಬರುತ್ತಾ ಕಾದು ನೋಡಬೇಕಿದೆ.