ಮುಂಬೈ, ಜೂ 11 (DaijiworldNews/DB): ಚಿತ್ರರಂಗಕ್ಕೆ ಕಾಲಿಟ್ಟ ಆರಂಭದ ದಿನಗಳಲ್ಲಿ ಬಹಳ ಒತ್ತಡ ಇತ್ತು. ಸ್ತನ, ಮೂಗು, ಕಾಲು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವಂತೆ ಹೇಳುತ್ತಿದ್ದರು ಎಂದು ಬಾಲಿವುಡ್ ನಟಿ ರಾಧಿಕಾ ಆಪ್ಟೆ ಚಿತ್ರರಂಗದ ಕಹಿ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ.
ಅವರು ನಟಿಸಿರುವ ’ಫೊರೆನ್ಸಿಕ್’ ಸಿನಿಮಾದ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಅವರು, ಆರಂಭಿಕ ದಿನಗಳಲ್ಲಿ ಚಿತ್ರರಂಗದಲ್ಲಿ ಎದುರಿಸಿದ ಸಂಕಷ್ಟಗಳ ಕುರಿತು ಮಾತನಾಡುತ್ತಾ, ದೇಹ ಮತ್ತು ಮುಖಕ್ಕೆ ಮಾರ್ಪಾಡುಗಳನ್ನು ಮಾಡಿಕೊಳ್ಳುವಂತೆ ಸಂಬಂಧಪಟ್ಟವರು ಹೇಳಿದ್ದನ್ನು ಬಿಚ್ಚಿಟ್ಟರು.
ಆರಂಭಿಕ ದಿನಗಳು ಸುಲಭವಾಗಿರಲಿಲ್ಲ. ಮೊದಲು ಮೂಗನ್ನು ಬದಲಾಯಿಸಿಕೊಳ್ಳಲು ಹೇಳಿದ್ದರು. ಎರಡನೇ ಬಾರಿ ಸ್ತನಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಲು ಹೇಳಿದ್ದರು. ಬಳಿಕ ಕಾಲು, ದವಡೆ, ಗಲ್ಲ...ಎಲ್ಲದಕ್ಕೂ ಪ್ಲಾಸ್ಟಿಕ್ ಸರ್ಜರಿಯನ್ನು ಸೂಚಿಸಿದ್ದರು. ಆದರೆ ಯಾರ ಮಾತಿಗೂ ಬೆಲೆ ನೀಡದೆ ಸ್ವ ಸಾಮರ್ಥ್ಯದಿಂದ ಬೆಳೆದು ಬಂದು ನನ್ನದೇ ನೆಲೆ ಕಂಡು ಕೊಂಡಿದ್ದೇನೆ ಎನ್ನುತ್ತಾರೆ ನಟಿ.
ಸದ್ಯ ರಾಧಿಕಾ ಆಪ್ಟೆ ಅವರು ಜನಪ್ರಿಯ ನಟಿಯಾಗಿದ್ದು, ವೆಬ್ ಸೀರೀಸ್ಗಳಲ್ಲಿಯೂ ದೊಡ್ಡ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ತಮ್ಮ ಜೀವನದಲ್ಲಿ ಭದ್ರ ಬದುಕೂ ಅವರದು. ಯಾರ ಹಂಗಿನಲ್ಲಿಯೂ ಇಲ್ಲದ ಕಾರಣ ಚಿತ್ರರಂಗದ ಅನೇಕ ಕಹಿಸತ್ಯಗಳನ್ನು ಸಾರ್ವಜನಿಕವಾಗಿ ಆಪ್ಟೆ ಹೇಳಿಕೊಂಡಿದ್ದಾರೆ.
ವಿಕ್ರಾಂತ್ ಮೆಸ್ಸಿಗೆ ಜೋಡಿಯಾಗಿ ರಾಧಿಕಾ ನಟಿಸಿದರು ಫಾರೆನ್ಸಿಕ್' ಸಿನಿಮಾ ಜೂನ್ 23ರಂದು ಜೀ5 ಮೂಲಕ ಬಿಡುಗಡೆಗೊಳ್ಳಲಿದೆ.