ಮೇ 30 (DaijiworldNews/HR): ಬಾಲಿವುಡ್ ನಟಿ ರಾಕಿ ಸಾವಂತ್ ಅವರು ಮೈಸೂರು ಹುಡುಗ ಆದಿಲ್ ನನ್ನು ಪ್ರೀತಿಸುತ್ತಿದ್ದು, ಅವರ ಕುಟುಂಬದವರು ನಾನು ಹಾಕುವ ಬಟ್ಟೆಗಳನ್ನು ಇಷ್ಟ ಪಡುವುದಿಲ್ಲ. ಹಾಗಾಗಿ ನಾನು ತುಂಡುಡುಗೆ ಬಿಟ್ಟು, ತುಂಬುಡುಗೆ ಹಾಕಿಕೊಳ್ಳುತ್ತೇನೆ ಎಂದು ರಾಖಿ ಹೇಳಿದ್ದು, ಈ ಸುದ್ದಿ ವೈರಲ್ ಆಗಿದೆ.
ರಾಕಿ ಸಾವಂತ್ ತನ್ನ ಪ್ರಿಯಕರನೊಂದಿಗೆ ಇದೀಗ ದುಬೈ ಟ್ರಿಪ್ ಮಾಡಿ ಬಂದಿದ್ದು, ತನ್ನ್ ಹುಡುಗನ ಜೊತೆ ಮುಂಬೈ ಏರ್ಪೋಟ್ ನಲ್ಲಿ ಇಳಿದ ರಾಕಿ ಸಾವಂತ್, ಹುಡುಗನ ತೊಳುಗಳನ್ನು ಗಟ್ಟಿಯಾಗಿ ಹಿಡಿದುಕೊಂಡೆ ಕ್ಯಾಮೆರಾಗಳಿಗೆ ಫೋಸು ಕೊಟ್ಟಿದ್ದಾರೆ.
ಇನ್ನು ರಾಕಿ ಡಿವೋರ್ಸ್ ಪಡೆದ ನಂತರ ಮೈಸೂರಿನ ಆದಿಲ್ ಎಂಬ ಹುಡುಗನ ಜೊತೆ ತಿರುಗುತ್ತಿದ್ದು, ಆ ಹುಡುಗನನ್ನು ಲವರ್ ಎಂದೇ ಪರಿಚಯಿಸುತ್ತಿದ್ದಾರೆ.
ರಾಕಿ ಲವರ್ ಒಂದು ಬಿಎಮ್ ಡಬ್ಲು ಕಾರು ಮತ್ತು ದುಬೈನಲ್ಲಿ ಒಂದು ಮನೆಯನ್ನು ಉಡುಗೊರೆಯಾಗಿ ಕೊಟ್ಟಿದ್ದಾನೆ ಎಂದು ಸ್ವತಃ ರಾಕಿ ಸಾವಂತ್ ಅವರೇ ಹೇಳಿದ್ದಾರೆ.