ಮುಂಬೈ, ಮೇ 29 (DaijiworldNews/HR): ಸಿನಿಮಾ ರಂಗದ ಸಿಲೆಬ್ರಿಟಿಗಳು ಹೋದಾಗ ಅವರ ಜೊತೆ ಸಾಮಾನ್ಯವಾಗಿ ಬಾಡಿಗಾರ್ಡ್ಸ್ ಹೋಗುತ್ತಾರೆ. ಆದರೆ ಇತ್ತೀಚೆಗೆ ನಡೆದ ಬಾಲಿವುಡ್ ನಟ, ನಿರ್ಮಾಪಕ, ನಿರ್ದೇಶಕ ಕರಣ್ ಜೋಹಾರ್ ಹುಟ್ಟು ಹಬ್ಬಕ್ಕೆ ಬಾಡಿಗಾರ್ಡ್ಸ್ ನಿರ್ಬಂಧಿಸಲಾಗಿತ್ತು ಎನ್ನಲಾಗಿದೆ.
ಕರಣ್ ಜೋಹಾರ್ ಮೊನ್ನೆಯಷ್ಟೇ ಅದ್ಧೂರಿಯಾಗಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು, ಸಂಭ್ರಮಾಚರಣೆಗೆ ಕೇವಲ ಬಾಲಿವುಡ್ ನಟ ನಟಿಯರು ಮಾತ್ರವಲ್ಲದೆ ದಕ್ಷಿಣದ ತಾರೆಯರಿಗೂ ಆಹ್ವಾನ ನೀಡಲಾಗಿದ್ದು, ಜೊತೆಗೆ ಬಾಡಿಗಾರ್ಡ್ಸ್ ಕರೆದುಕೊಂಡು ಬರಬೇಡಿ ಎಂದು ಸೂಚನೆ ನೀಡಲಾಗಿತ್ತು.
ಇನ್ನು ದೀಪಿಕಾ ಪಡುಕೋಣೆ, ಐಶ್ವರ್ಯ ರೈ, ಶಾರುಖ್ ಖಾನ್, ದಕ್ಷಿಣದಿಂದ ರಶ್ಮಿಕಾ ಮಂದಣ್ಣ, ಪೂಜಾ ಹೆಗಡೆ, ವಿಜಯ್ ದೇವರಕೊಂಡ ಸೇರಿದಂತೆ ಸಾಕಷ್ಟು ಸಿಲೆಬ್ರಿಟಿಗಳು ಈ ಹುಟ್ಟು ಹಬ್ಬದ ಪಾರ್ಟಿಗೆಯಲ್ಲಿ ಹಾಜರಿದ್ದರು.