ಮುಂಬೈ, ಮೇ 27 (DaijiworldNews/HR): ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ದಿಶಾ ಪಟಾನಿ ಅವರು ಬೋಲ್ಡ್ ಪೋಟೊಗಳ ಮೂಲಕ ಎಲ್ಲರ ಗಮನಸೆಳೆಯುತ್ತಿದ್ದು, ಇದೀಗ ಹಾಟ್ ಅವತಾರ ತಾಳಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ದಿಶಾ ಪಟಾನಿ ಅವರು ಫಿಟ್ನೆಸ್ ವಿಚಾರದಲ್ಲೂ ಫೇಮಸ್ ಆಗಿದ್ದು, ಎಷ್ಟೇ ಬ್ಯುಸಿ ಇದ್ದರೂ ಅವರು ಜಿಮ್ನಲ್ಲಿ ವರ್ಕೌಟ್ ಮಾಡುವುದನ್ನು ತಪ್ಪಿಸುವುದಿಲ್ಲ. ಅದೇ ರೀತಿ ಡಯೆಟ್ ಬಗ್ಗೆಯೂ ಕಾಳಜಿ ವಹಿಸುತ್ತಾರೆ.
ಇನ್ನು 2015ರಲ್ಲಿ ತೆಗುಲಿನ ಲೋಫರ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿರುವ ದಿಶಾ ಬಳಿಕ ಅನೇಕ ಸಿನಿಮಾಗಳಲ್ಲಿ ನಟಿಸಿ ಸೈ ಎಣಿಸಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ದಿಶಾ ಪಟಾನಿ ಅವರಿಗೆ ಇನ್ಟಾಗ್ರಾಮ್ ನಲ್ಲಿ ಐದು ಕೋಟಿಗೂ ಅಧಿಕ ಜನರು ಫಾಲೋವರ್ಸ್ ಇದ್ದು, ಅವರ ಅಭಿಮಾನಿಗಳಿಗಾಗಿ ಯಾವಾಗಳೂ ಪೋಟೊ, ವಿಡಿಯೋ ಹಂಚಿಕೊಳ್ಳುತ್ತಿರುತ್ತಾರೆ.