ಮುಂಬೈ, ಮೇ 25 (DaijiworldNews/MS): 75ನೇ ಕ್ಯಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಜ್ಯೂರಿಯಾಗಿರುವ ಭಾಗಿಯಾಗಿರುವ ದೀಪಿಕಾ ಪಡುಕೋಣೆಯ ಬಿಲ್ವಿಂಗ್ ಟ್ಯಾಂಗರಿನ್ ಗೌನ್ ನೋಡಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಮೊದಲ ದಿನ ತಮ್ಮ ವಿಭಿನ್ನ ವಸ್ತ್ರ ವಿನ್ಯಾಸದಿಂದ ಹಾಗೂ ಸರಳ ಮೇಕಪ್ ನಿಂದ ಫ್ಯಾಶನ್ ಪ್ರಿಯರ ಮನಗೆದ್ದಿದ್ದರು. ಅಲ್ಲದೆ ಪ್ರತಿ ದಿನವೂ ದೀಪಿಕಾ ಪಡುಕೋಣೆ ಭಿನ್ನ ಡ್ರೆಸ್ನ ಮೂಲಕ ಒಂದಿಷ್ಟು ಅಭಿಮಾನಿಗಳ ಹುಚ್ಚೆಬ್ಬಿಸಿದ್ದರು.
ಆದರೆ ಇತ್ತೀಚೆಗೆ ಬಿಲ್ವಿಂಗ್ ಟ್ಯಾಂಗರಿನ್ ಗೌನ್ ಆರೆಂಜ್ ಡ್ರೆಸ್ನಲ್ಲಿ ದೀಪಿಕಾ ಪರದಾಟ ನೋಡಿ ನೆಟ್ಟಿಗರಿಗೆ ಅಸಮಾಧಾನ ಹೊರಹಾಕಿದ್ದಾರೆ. ವೈರಲ್ ಆಗಿರುವ ರೆಡ್ ಕಾರ್ಪೆಟ್ನ ವೀಡಿಯೊದಲ್ಲಿ, ನಟಿ ನಿರಂತರವಾಗಿ ತನ್ನ ಸಹೋದ್ಯೋಗಿಗಳು ಮತ್ತು ತಂಡದ ಸಹಾಯದಿಂದ ಹಾಗೂ ತಮ್ಮ ವಸ್ತ್ರ ತಾವೇ ಸರಿಮಾಡುತ್ತಿರುವುದನ್ನು ಕಾಣಬಹುದಾಗಿದೆ. ನಡೆಯಲು ಕಷ್ಟಪಡುತ್ತಿರುವುದನ್ನು ನೋಡಿ ನೆಟ್ಟಿಗರಿಗೆ ಸರಿ ಕಾಣದೆ ಟ್ರೋಲ್ ಮಾಡುತ್ತಿದ್ದಾರೆ.
ನೋಡುಗರಿಗೆ ಮಾದರಿಯಾಗುವಂತಹ ಬಟ್ಟೆ ಹಾಕಿ ಎಂದು ಕೆಲವರು ಹೇಳಿದರೆ ವಿಚಿತ್ರ ಬಟ್ಟೆಯನ್ನು ಸುತ್ತಿಕೊಂಡು ಬರುವ ಬದಲು ಲಕ್ಷಣವಾದ ಬಟ್ಟೆಯಲ್ಲಿ ಬರಬಹುದಲ್ವಾ ಎಂದು ಪ್ರಶ್ನಿಸಿದ್ದಾರೆ.