ಮುಂಬೈ, ಮೇ 09 (DaijiworldNews/HR): ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಪತಿ ನಿಕ್ ಜೋನಾಸ್ ಅಮ್ಮಂದಿರ ದಿನದ ಅಂಗವಾಗಿ ತಮ್ಮ ಮಗುವಿನ ಪೋಟೊವನ್ನು ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ.
ಪೋಟೊದಲ್ಲಿ ಪ್ರಿಯಾಂಕಾ ತನ್ನ ಮಗುವನ್ನು ತೋಳುಗಳಲ್ಲಿ ಹಿಡಿದಿಕೊಂಡಿದ್ದು,ನಿಕ್ ಮಗುವನ್ನು ನೋಡುತ್ತಿರುವುದನ್ನು ಕಾಣಬಹುದು.
ಇನ್ನು ಮಗುವುನ ಮುಖವನ್ನು ನಟಿ ಪ್ರಿಯಾಂಕಾ ಚೋಪ್ರಾ ಬಹಿರಂಗಪಡಿಸದೇ ಮಗುವಿನ ಮುಖದ ಮೇಲೆ ಹೃದಯದ ಎಮೋಜಿಯನ್ನು ಹಾಕಿದ್ದಾರೆ.
ನಾವು ಕಳೆದ ಕೆಲವು ತಿಂಗಳಗಳ ಹಿಂದೆ ನಿನ್ನನ್ನು ಪಡೆದಿದ್ದೇವೆ. ನೀನು ಮನೆಗೆ ಬಂದ ಬಳಿಕ ತುಂಬಾ ಸಂತೋಷದಿಂದ ಇದ್ದೇವೆ ಎಂದು ಇನ್ಟಾಗ್ರಾಮ್ ಪೋಸ್ಟ್ ನಲ್ಲಿ ಪೋಟೊ ಹಂಚಿಕೊಂಡು ಬರೆದುಕೊಂಡಿದ್ದಾರೆ.