ಮುಂಬೈ, ಮೇ 08 (DaijiworldNews/HR): ನಟಿ ಕಾಜಲ್ ಅಗರ್ವಾಲ್ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದು, ತನ್ನಕಂದನ ಜೊತೆಗಿನ ಹೃದಯಸ್ಪರ್ಶಿ ಫೋಟೋಗಳನ್ನು ಅಮ್ಮಂದಿರ ದಿನನ ಅಂಗವಾಗಿ ಹಂಚಿಕೊಂಡಿದ್ದಾರೆ.
ಕಾಜಲ್ ತನ್ನ ಮಗನಿಗೆ ನೀಲ್ ಎಂದು ಹೆಸರಿಟ್ಟಿದ್ದು, ಇಂದು ಅಮ್ಮಂದಿರ ದಿನವಾಗಿದ್ದರಿಂದ ತಮ್ಮ ಕಂದಮ್ಮನ ಫೋಟೋ ಜೊತೆಗೆ ಭಾವನ್ಮಾಕ ಸಾಲು ಬರೆದು ಪೋಸ್ಟ್ ಮಾಡಿದ್ದಾರೆ.
ಇನ್ನು ಈ ಫೋಟೋವನ್ನು ಕಾಜಲ್ ಇನ್ಸ್ಟಾದಲ್ಲಿ ಶೇರ್ ಮಾಡಿದ್ದು, ನನ್ನ ಪ್ರೀತಿಯ ನೀಲ್, ನೀನು ನನಗೆ ಯಾವಾಗಲೂ ಎಷ್ಟು ಅಮೂಲ್ಯವಾದವನು ಎಂದು ತಿಳಿಯಬೇಕೆಂದು ನಾನು ಬಯಸುತ್ತೇನೆ. ನಾನು ನಿನ್ನನ್ನು ನನ್ನ ತೋಳುಗಳಲ್ಲಿ ಹಿಡಿದಿಟ್ಟುಕೊಂಡೆ. ನಿನ್ನ ಪುಟ್ಟ ಕೈಯನ್ನು ನಾನು ಹಿಡಿದುಕೊಂಡಾಗ ನಿನ್ನ ಬೆಚ್ಚಗಿನ ಉಸಿರನ್ನು ನಾನು ಅನುಭವಿಸಿದೆ. ನಿನ್ನ ಸುಂದರವಾದ ಕಣ್ಣುಗಳನ್ನು ನೋಡಿದ ಕ್ಷಣ, ನಾನು ಶಾಶ್ವತವಾಗಿ ನಿನ್ನನ್ನು ಪ್ರೀತಿಸುತ್ತಿದ್ದೇನೆ. ನೀನು ನನ್ನ ಮೊದಲ ಮಗು. ಮುಂಬರುವ ವರ್ಷಗಳಲ್ಲಿ, ನಾನು ನಿನಗೆ ಕಲಿಸಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ಆದರೆ ನೀನು ಈಗಾಗಲೇ ನನಗೆ ಸಾಕಷ್ಟು ಪ್ರಮಾಣದಲ್ಲಿ ಕಲಿಸಿದ್ದೀಯಾ. ನೀನು ನನಗೆ ನಿಸ್ವಾರ್ಥವಾಗಿರಲು, ಶುದ್ಧ ಪ್ರೀತಿ ಎಲ್ಲವನ್ನು ಕಲಿಸಿದ್ದೀಯ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಈ ಸಾಲುಗಳನ್ನು ನೋಡಿದ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಕಾಮೆಂಟ್ಗಳಸುರಿಮಳೆ ಸುರಿಸಿದ್ದಾರೆ.