ಮುಂಬೈ, ಮೇ 07 (DaijiworldNews/DB): ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ದಂಪತಿ ಆಗಾಗ ತಮ್ಮ ಸುಮಧುರ ಬಾಂಧವ್ಯದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಖುಷಿ ನೀಡುತ್ತಿದ್ದಾರೆ. ಈಗ ಈ ದಂಪತಿ ವಿಶೇಷವಾದ ಫೋಟೋವನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ.
ಸ್ವಿಮ್ಮಿಂಗ್ ಫೂಲ್ನಲ್ಲಿ ಪತಿ ವಿಕ್ಕಿಯನ್ನು ತಬ್ಬಿ ಹಿಡಿದುಕೊಂಡ ಫೋಟೋವನ್ನು ಕತ್ರಿನಾ ಶೇರ್ ಮಾಡಿದ್ದು, "ನಾನು ಮತ್ತು ನನ್ನವನು’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಇದರಲ್ಲಿ ವಿಕ್ಕಿ ಶರ್ಟ್ಲೆಸ್ ಆಗಿದ್ದರೆ, ಕತ್ರಿನಾ ಬಿಳಿ ಬಣ್ಣದ ಸ್ಲೀವ್ಲೆಸ್ ಬಟ್ಟೆಯೊಂದನ್ನು ಧರಿಸಿಕೊಂಡಿದ್ದಾರೆ. ಕತ್ರಿನಾ ತಮ್ಮ ಪತಿ ವಿಕ್ಕಿಯನ್ನು ತಬ್ಬಿ ಹಿಡಿದುಕೊಂಡು ಸ್ವಿಮ್ಮಿಂಗ್ ಫೂಲ್ನಲ್ಲೇ ಫೋಟೋಗೆ ಫೋಸ್ ನೀಡಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ. ಈ ಫೋಟೋಕ್ಕೆ ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳು ಕೂಡಾ ಕಮೆಂಟ್ ಮಾಡಿದ್ದಾರೆ. ಬಾಲಿವುಡ್ ನಟ ಹೃತಿಕ್ ರೋಶನ್ ಅವರು ಸೋ ನೈಸ್ ಎಂಬುದಾಗಿ ಕಮೆಂಟ್ ಮಾಡಿದರೆ, ಪ್ರಿಯಾಂಕಾ ಚೋಪ್ರಾ ಕಣ್ಣಿನಲ್ಲಿ ಹಾರ್ಟ್ ಇರುವ ಇಮೋಜಿ ಹಂಚಿಕೊಂಡು ದಂಪತಿಯ ಫೋಟೋಗೆ ಕಮೆಂಟ್ ಮಾಡಿದ್ದಾರೆ.
ಕಳೆದ ವರ್ಷವಷ್ಟೇ ಮದುವೆಯಾದ ಕತ್ರಿನಾ-ವಿಕ್ಕಿ ಜೋಡಿ ಮದುವೆಯಾದಂದಿನಿಂದಲೇ ಸಿನಿಮಾಗಳಲ್ಲಿ ಬ್ಯುಸಿ ಇರುತ್ತಿದ್ದರು. ಈ ನಡುವೆ ಬಿಡುವಾದಾಗ ಜೊತೆಗಿರುವ ಫೋಟೋ ಹಂಚಿಕೊಂಡು ಖುಷಿ ಪಡುತ್ತಿದ್ದರು. ಅಂದ ಹಾಗೆ ಕತ್ರಿನಾ ವಯಸ್ಸಿನಲ್ಲಿ ವಿಕ್ಕಿಗಿಂತ ದೊಡ್ಡವರು. ಆದರೆ ಇಬ್ಬರ ಪ್ರೀತಿಗೆ ವಯಸ್ಸು ಅಡ್ಡಿ ಬರಲಿಲ್ಲ. ಪ್ರೀತಿಯನ್ನು ಮದುವೆ ತನಕವೂ ಗುಟ್ಟಾಗಿಯೇ ಇಟ್ಟಿದ್ದ ಜೋಡಿ ಹಸೆಮಣೆ ಏರಿದಾಗಲೇ ಇಬ್ಬರು ಜೋಡಿಹಕ್ಕಿಗಳು ಪ್ರೇಮಿಸುತ್ತಿದ್ದರು ಎಂಬುದು ಗೊತ್ತಾಗಿದ್ದು. ಸದ್ಯ ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿ ಇದ್ದು, ಕತ್ರಿನಾ . 'ಟೈಗರ್ 3' ಶೂಟಿಂಗ್ನಲ್ಲಿ ತೊಡಗಿಸಿಕೊಂಡಿದ್ದಾರೆ.