ಮುಂಬೈ, ಮೇ 06 (DaijiworldNews/DB): ನಟಿ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಪರಸ್ಪರ ರಿಲೇಶನ್ಶಿಪ್ನಲ್ಲಿರುವುದು ತಿಳಿದ ವಿಚಾರ. ಆದರೆ ಇದು ಟೈಮ್ ಪಾಸ್ ಲವ್ವಾ ಅಥವಾ ನಿಜವಾಗಿಯೂ ಜೊತೆಯಾಗುತ್ತಾರಾ ಎಂಬುದೇ ಅಭಿಮಾನಿಗಳ ಪ್ರಶ್ನೆಯಾಗಿತ್ತು. ಆದರೆ ಮಲೈಕಾರ ಈ ಒಂದು ಮಾತು ಅವರಿಬ್ಬರು ಮದುವೆಯಾಗಲಿದ್ದಾರೆ ಎಂಬುದಕ್ಕೆ ಪುಷ್ಠಿ ನೀಡಿದೆ.
ಕಳೆದ ಮೂರು ವರ್ಷಗಳಿಂದ ಈ ಜೋಡಿ ಆಗಾಗ ಒಟ್ಟಾಗಿ ಕಾಣಸಿಗುತ್ತದೆ. ಆದರೆ ಇವರಿಬ್ಬರು ನಿಜವಾಗಿಯೂ ಪ್ರೀತಿಸುತ್ತಿದ್ದಾರೆಯೇ ಎಂಬ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಪ್ರಶ್ನೆಗಳಿದ್ದವು. ಏಕೆಂದರೆ ಮಲೈಕಾ ಅರ್ಜುನ್ಗಿಂತ ವಯಸ್ಸಿನಲ್ಲಿ ತುಂಬಾ ದೊಡ್ಡವರು. ಹೀಗಾಗಿ ಲಿವ್-ಇನ್-ರಿಲೇಶನ್ಶಿಪ್ನಲ್ಲಿದ್ದರೂ ಎಲ್ಲಿಯೂ ತಾವು ಮದುವೆಯಾಗುತ್ತೇವೆಂದು ಈ ಜೋಡಿ ಬಾಯಿ ಬಿಟ್ಟಿರಲಿಲ್ಲ. ಹಾಗಾಗಿ ಇದು ಟೈಮ್ ಪಾಸ್ ಲವ್ ಎಂದೇ ಅಭಿಮಾನಿಗಳು ಭಾವಿಸಿದ್ದರು.
ಆದರೆ ಇತ್ತೀಚೆಗೆ ಮಲೈಕಾ ಹೇಳಿರುವ ಮಾತೊಂದು ಸಂಬಂಧದಲ್ಲಿ ಅವರ ಪ್ರಬುದ್ಧತೆಯನ್ನು ತಿಳಿಸಿದ್ದಲ್ಲದೆ, ಇಬ್ಬರೂ ಜೊತೆಗೇ ಜೀವನ ಕಳೆಯಲಿದ್ದಾರೆ ಎಂಬುದಕ್ಕೆ ಪುಷ್ಠಿ ಒದಗಿಸಿದೆ. ಪ್ರತಿ ಸಂಬಂಧವೂ ಅದರದ್ದೇ ಆದ ರೀತಿ ನೀತಿಗಳನ್ನು ಒಳಗೊಂಡಿರುತ್ತದೆ. ನಾನು ಮತ್ತು ಅರ್ಜುನ್ ಕೂಡಾ ಹಲವು ವಿಚಾರಗಳ ಬಗ್ಗೆ ಮಾತನಾಡುತ್ತೇವೆ. ನಮ್ಮಿಬ್ಬರ ಆಲೋಚನೆಗಳೂ ಒಂದೇ ಆಗಿದೆ. ಇಬ್ಬರೂ ತುಂಬಾ ಪ್ರೀತಿಸುತ್ತೇವೆ. ಭವಿಷ್ಯವನ್ನು ಒಟ್ಟಿಗೇ ಕಳೆಯುತ್ತೇವೆ ಎಂದು ಸಂದರ್ಶನವೊಂದರಲ್ಲಿ ಮಲೈಕಾ ಹೇಳಿದ್ದಾರೆ. ಸಂಬಂಧಗಳಲ್ಲಿ ಪಾಸಿಟಿವ್ ವೈಬ್ ಇರಬೇಕೆಂದು ಅಭಿಮಾನಿಗಳಿಗೂ ಅವರ ಸಲಹೆ ಮಾಡಿದ್ದಾರೆ.