ಮುಂಬೈ, ಮೇ 05 (DaijiworldNews/HR): ನಟಿ ಮಂದಿರಾ ಬೇಡಿ ತನ್ನ ಗೆಳೆಯನ ಹುಟ್ಟುಹಬ್ಬಕ್ಕಾಗಿ ಫೋಟೋ ಪೋಸ್ಟ್ ಮಾಡಿದ್ದು, ಅದನ್ನು ಕಂಡ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ.
ಕೆಲವು ತಿಂಗಳ ಹಿಂದೆ ಮಂದಿರಾ ಬೇಡಿ ಅವರು ಪತಿ ರಾಜ್ ಕೌಶಲ್ ಅವರನ್ನು ಕಳೆದುಕೊಂಡಿದ್ದು, ಆ ನೋವನ್ನು ಮರೆತಿರುವ ಮಂದಿರಾ ಬೇಡಿ ಅವರು ಗೆಳೆಯನ ಜೊತೆ ಈ ರೀತಿಯಲ್ಲಿ ಖುಷಿಖುಷಿಯಾಗಿ, ಸಾಕಷ್ಟು ಆಪ್ತವಾಗಿ ಪೋಸ್ ನೀಡಿದ್ದಾರೆ. ಅದನ್ನು ಕಂಡು ನೆಟ್ಟಿಗರು ಗರಂ ಆಗಿದ್ದಾರೆ.
ಇನ್ನು ಮಂದಿರಾ ಬೇಡಿ ಸ್ವಿಮಿಂಗ್ ಪೂಲ್ನಲ್ಲಿ ಬಿಕಿನಿ ಧರಿಸಿ, ಗೆಳೆಯನ ಜೊತೆ ಎಂಜಾಯ್ ಮಾಡುತ್ತಿರುವ ಖುಷಿಯ ಕ್ಷಣಗಳು ಈ ಫೋಟೋದಲ್ಲಿವೆ.
ಮಂದಿರಾ ಬೇಡಿ ಅವರ ಗೆಳೆಯನ ಹೆಸರು ಆದಿ. 'ಹ್ಯಾಪಿ ಬರ್ತ್ಡೇ ಆದಿ. ನನ್ನ ಪಾಲಿಗೆ ನೀನು ಏನು? ನಮ್ಮ ಸಂಬಂಧ ಯಾವ ರೀತಿ ಇದೆ? ಎಷ್ಟು ವರ್ಷಗಳಿಂದ ನಾವಿಬ್ಬರು ಪರಿಚಿತರು ಎಂಬುದನ್ನು ಈ ಫೋಟೋವೇ ಹೇಳುತ್ತಿದೆ' ಎಂದು ಮಂದಿರಾ ಬೇಡಿ ಕ್ಯಾಪ್ಷನ್ ನೀಡಿದ್ದಾರೆ.