ಮೇ 03 (DaijiworldNews/HR): ನ್ಯೂಯಾರ್ಕ್ನಲ್ಲಿ ಪ್ರತಿ ವರ್ಷ ನಡೆಯುವ ಮೆಟ್ ಗಾಲಾ ಎಂಬ ಫ್ಯಾಷನ್ ಸಮಾರಂಭದಲ್ಲಿ ಜಗತ್ತಿನ ಬೇರೆ ಬೇರೆ ಖ್ಯಾತ ಸೆಲೆಬ್ರಿಟಿಗಳು ಭಾಗವಹಿಸುತ್ತಿದ್ದು, ಇದರಲ್ಲಿ ನಟಾಶಾ ಅವರ ಉಡುಗೆ ತುಂಬಾನೇ ಗಮನ ಸೆಳೆದಿದೆ.
ನ್ಯೂಯಾರ್ಕ್ನಲ್ಲಿ ಈ ಬಾರಿ ಅದ್ದೂರಿಯಾಗಿ ಮೆಟ್ ಗಾಲಾ ಆಯೋಜನೆಗೊಂಡಿದ್ದು, ಈ ಸಮಾರಂಭದಲ್ಲಿ ಸೆಲೆಬ್ರಿಟಿಗಳು ಚಿತ್ರ ವಿಚಿತ್ರ ಬಟ್ಟೆಗಳನ್ನು ಧರಿಸಿ ಸೆಲೆಬ್ರಿಟಿಗಳು ಹೆಜ್ಜೆ ಹಾಕುತ್ತಾರೆ.
ಇನ್ನು ನಟಾಶಾ ಅವರ ಉಡುಗೆ ತುಂಬಾನೇ ಗಮನ ಸೆಳೆದಿದ್ದು, ಅವರ ದೇಹ ಹಾಗೂ ಬಟ್ಟೆ ಪೂರ್ತಿಯಾಗಿ ಚಿನ್ನದ ಬಣ್ಣದ ರೂಪದಲ್ಲಿದ್ದು, ಅವರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ನಟಾಶಾ ಅವರು ಭಾರತದ ಮಹಿಳಾ ಉದ್ಯಮಿಯಾಗಿದ್ದು, ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲಾ ಅವರ ಪತ್ನಿ ನಟಾಶಾ ಆಗಿದ್ದಾರೆ.