ಮಂಗಳೂರು, ಮೇ 02 (DaijiworldNews/MS): ತುಳುನಾಡಿನಲ್ಲಿ 50 ದಿನಕ್ಕೂ ಹೆಚ್ಚು ಪ್ರದರ್ಶನ ಕಂಡ ಈ ವರ್ಷದ ಸೂಪರ್ ಹಿಟ್ ತುಳು ಚಿತ್ರ ಭೋಜರಾಜ್ ಎಂ.ಬಿ.ಬಿ.ಎಸ್ ಮೇ 6 ರಿಂದ ದುಬೈ, ಶಾರ್ಜಾ, ಅಬುದಾಬಿ ಯಲ್ಲಿ ಒಟ್ಟು 6 ಥಿಯೇಟರ್ ಗಳಲ್ಲಿ ತೆರೆಕಾಣಲಿದ್ದು, ಮೇ 20 ರಿಂದ ಕತಾರ್,ಕುವೈತ್, ಬೆಹರೈನ್, ಒಮನ್,ಸೌದಿ ಅರೇಬಿಯಾ ದಲ್ಲಿ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
ಚಿತ್ರ ತೆರೆಕಂಡ ಎಲ್ಲ ಕಡೆಯೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು , ಚಿತ್ರದ ಕತೆ,ಹಾಗೂ ಹಾಸ್ಯ,ಹಾಡುಗಳು ಮತ್ತು ಉತ್ತಮ ಸಂದೇಶ ಇದ್ದು , ಮೊದಲ ಬಾರಿಗೆ ಬೋಜರಾಜ್ ವಾಮಂಜೂರು ನಾಯಕ ನಟನಾಗಿ ಕಾಣಿಸಿಕೊಡಿದ್ದು ,ಅರವಿಂದ್ ಬೋಳಾರ್, ದೇವದಾಸ್ ಕಾಪಿಕಾಡ್, ವಿಜಯಕುಮಾರ್ ಕೊಡಿಯಾಲ್ ಬೈಲ್ ,ಉಮೇಶ್ ಮಿಜಾರ್,ರವಿ ರಾಮಕುಂಜ, ಶೀತಲ್ ನಾಯಕ್, ನವ್ಯಪೂಜಾರಿ ಮೊದಲಾದವರು ಅಭಿನಯಿಸಿದ್ದಾರೆ ,ದರ್ಬಾರ್ ಸಿನೆಮಾಸ್ ನಲ್ಲಿ ರಫೀಕ್ ದರ್ಬಾರ್ ನಿರ್ಮಾಣದ ಈ ಚಿತ್ರವನ್ನು ಶ್ರೀಮತಿ ಪ್ರಭಾ ಸುವರ್ಣ ಹಾಗೂ ನಾರಾಯಣ ಪಿ ಸುವರ್ಣ ಅರ್ಪಿಸಿದ್ದಾರೆ.
ಪರ್ವೇಜ್ ಬೆಳ್ಳಾರೆ ,ಶರಣ್ ರಾಜ್ ಕಾಸರಗೋಡು ಸಹ ನಿರ್ಮಾಣದ ಈ ಚಿತ್ರಕ್ಕೆ ಇಸ್ಮಾಯಿಲ್ ಮೂಡುಶೆಡ್ಡ ಆಕ್ಷನ್ ಕಟ್ ಹೇಳಿದ್ದಾರೆ, ಮೊದಲ ಬಾರಿಗೆ ತುಳು ನಾಟಕ ಹಾಗೂ ಚಿತ್ರರಂಗದ ದಿಗ್ಗಜರೇನಿಸಿರುವ ದೇವದಾಸ್ ಕಾಪಿಕಾಡ್ ಮತ್ತು ವಿಜಯ ಕುಮಾರ್ ಕೊಡಿಯಾಲ್ ಬೈಲ್ ಮೊದಲ ಬಾರಿಗೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.ತುಳು ನಾಡ ಮಾಣಿಕ್ಯ ಅರವಿಂದ್ ಬೋಳಾರ್ ಮೂರು ವಿಭಿನ್ನ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ , ಈ ಚಿತ್ರವನ್ನು ಗಲ್ಫ್ ಕಂಟ್ರಿ ಯಲ್ಲಿ ಸೆಂಥಿಲ್ ಬೆಂಗಳೂರು ಬಿಡುಗಡೆ ಮಾಡುತ್ತಿದ್ದಾರೆ