ಮುಂಬೈ, ಏ 28 (DaijiworldNews/MS): ದಕ್ಷಿಣ ಭಾರತದ ಭಾಷೆಗಳ ಸಿನಿಮಾಗಳ ಯಶಸ್ಸು ಬಾಲಿವುಡ್ ಮೇಲೆ ಪರಿಣಾಮ ಬೀರಿದ್ದು, ಇದು ಹಿಂದಿ ಚಲನಚಿತ್ರ ನಿರ್ಮಾಪಕರು ಬೆನ್ನುಮೂಳೆಯಲ್ಲಿ ನಡುಕವನ್ನು ಹುಟ್ಟಿಸಿದೆ ಎಂದು ನಟ ಮನೋಜ್ ಬಾಜಪೇಯಿ ಅಭಿಪ್ರಾಯಪಟ್ಟಿದ್ದಾರೆ.
KGF: 2, RRR, ಮತ್ತು ಪುಷ್ಪ: ದಿ ರೈಸ್ನಂತಹ ಚಲನಚಿತ್ರಗಳ ಯಶಸ್ಸು ಬಾಲಿವುಡ್ ಚಲನಚಿತ್ರ ನಿರ್ಮಾಪಕರಿಗೆ ಬೆನ್ನುಮೂಳೆಯಲ್ಲಿ ನಡುಕ ಹುಟ್ಟಿಸಿದ್ದು ಅದನ್ನು ಹೇಗೆ ನೋಡಬೇಕು ಎಂಬುವುದು ತಿಳಿಯದಾಗಿದೆ. ಸೂರ್ಯವಂಶಿಯಂತಹ ದೊಡ್ಡ ಬಿಜೆಟ್ ಹಿಂದಿ ಚಿತ್ರಗಳು ಭಾರತದಲ್ಲಿ 200ರೂ. ಕೋಟಿ ತಲುಪಲು ಹೆಣಗಾಡುತ್ತಿರುವಾಗ ಹಿಂದಿಗೆ ಡಬ್ ಆಗಿರುವ ಕೆಜಿಎಫ್ 2 ಅಥವಾ ಆರ್ಆರ್ಆರ್ ಏಕೆ 300 ರೂ. ಕೋಟಿ ಗಳಿಸಬಹುದು ಎಂಬುದರ ಕುರಿತು ಮನೋಜ್ ವಿವರವಾಗಿ ಮಾತನಾಡಿದ್ದಾರೆ. ಅಲ್ಲದೆ ಈ ಸಿನಿಮಾಗಳ ಯಶಸ್ಸು ಬಾಲಿವುಡ್ಗೆ ಪಾಠವಾಗಲಿದೆ. ಅದನ್ನು ಆದಷ್ಟು ಬೇಗನೆ ಕಲಿಯುವ ಅಗತ್ಯವಿದೆ' ಎಂದು ಸಂದರ್ಶನವೊಂದರಲ್ಲಿ ಕಿವಿಮಾತು ಹೇಳಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ನಂತರದ ಸಮಯದಲ್ಲಿ ತೆಲುಗು ನಟ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ; ದಿ ರೈಸ್' ಸಿನಿಮಾ ಯಶಸ್ಸು ಗಳಿಸಿತ್ತು. ಇದರೊಂದಿಗೆ ಹಿಂದಿ ಭಾಷಿಕ ಪ್ರದೇಶಗಳಲ್ಲಿಯೂ ದಕ್ಷಿಣದ ಸಿನಿಮಾಗಳು ಭರ್ಜರಿಯಾಗಿ ಯಶಸ್ಸು ಸಾಧಿಸಿತ್ತು. ಈ ಸಿನಿಮಾದ ಹಿಂದಿ ಅವತರಣಿಕೆಯು 100 ರೂ. ಕೋಟಿಗೂ ಅಧಿಕ ಗಳಿಕೆ ಕಂಡಿತ್ತು. ಇದರ ಬೆನ್ನಲ್ಲೇ ರಾಜಮೌಳಿ ನಿರ್ದೇಶನದ 'ಆರ್ಆರ್ಆರ್' ಮತ್ತು ಕನ್ನಡದ 'ಕೆಜಿಎಫ್–2' ಸಿನಿಮಾಗಳು 'ಪುಷ್ಪ' ದಾಖಲೆ ಮೀರಿ 300ರೂ. ಕೋಟಿಗೂ ಹೆಚ್ಚಿನ ಸಂಪಾದನೆ ಮಾಡಿವೆ.