ಮುಂಬೈ, ಏ 25 (DaijiworldNews/HR): ಬಾಲಿವುಡ್ನ ಸ್ಟಾರ್ ಜೋಡಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ಸದಾ ಒಬ್ಬರನ್ನೊಬ್ಬರು ಹೊಗಳಿಕೊಳ್ಳುತ್ತಿದ್ದು, ಇದೀಗ ದೀಪಿಕಾ ನನ್ನ ಪಾಲಿನ ಲಕ್ಷ್ಮಿ ಎಂದು ರಣವೀರ್ ಸಿಂಗ್ ಹೇಳಿದ್ದಾರೆ.
ಜಯೇಶ್ಭಾಯ್ ಜೋರ್ದಾರ್ನ ಪ್ರಚಾರದಲ್ಲಿ ನಿರತರಾಗಿರುವ ರಣವೀರ್ ಸಿಂಗ್ ಪ್ರೇಕ್ಷಕರೊಂದಿಗೆ ಸಂವಾದ ನಡೆಸಿದ್ದು, ಈ ವೇಳೆ ತನ್ನ ಹೆಂಡತಿಯನ್ನು ಕೊಂಡಾಡಿದ ಸಿಂಗ್ ನನ್ನ ಪತ್ನಿ ನಮ್ಮನೆಯ ಲಕ್ಷಿ ಎಂದು ಕರೆದಿದ್ದಾರೆ.
ರಣವೀರ್ ಸಿಂಗ್ ಅವರು ದಿವ್ಯಾಂಗ್ ಠಕ್ಕರ್ ನಿರ್ದೇಶನದ ತಮ್ಮ ಮುಂಬರುವ ಚಿತ್ರ ಜಯೇಶ್ಭಾಯ್ ಜೋರ್ದಾರ್ನ ಪ್ರಚಾರದಲ್ಲಿ ನಿರತರಾಗಿದ್ದು, ಈ ಚಿತ್ರದಲ್ಲಿ ಶಾಲಿನಿ ಪಾಂಡೆ ಮತ್ತು ಬೊಮನ್ ಇರಾನಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಜಯೇಶ್ಭಾಯ್ ಜೋರ್ದಾರ್ ಅವರ ಟ್ರೈಲರ್ ಏಪ್ರಿಲ್ 19, 2022 ರಂದು ಬಿಡುಗಡೆಯಾಗಿದ್ದು, ಈ ಸಿನಿಮಾಗೆ ಉತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅನೇಕ ವರ್ಷಗಳ ಪ್ರೀತಿಯ ಬಳಿಕ 2018 ರಲ್ಲಿ ರಣವೀರ್ ಸಿಂಗ್ ಅವರು ದೀಪಿಕಾ ಪಡುಕೋಣೆ ವಿವಾಹವಾಗಿದ್ದು, ಇವರಿಬ್ಬರು ಸದಾ ಪ್ರೇಮ ಪಕ್ಷಿಗಳಂತೆ ಇದ್ದಾರೆ.