ಮುಂಬೈ, ಏ 11 (DaijiworldNews/HR): ಬಾಲಿವುಡ್ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಗೆ ಕೆಲವೇ ದಿನಗಳು ಬಾಕಿಯಿದ್ದು, ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.
ಆಲಿಯಾ ಮತ್ತು ರಣಬೀರ್ ಇಬ್ಬರು 5 ವರ್ಷಗಳ ಲವ್ ಲೈಫ್ಗೆ ಹೊಸ ಅರ್ಥ ಕೊಡಲು ಮುಂದಾಗಿದ್ದು, ಇವರ ಮದುವೆಗೆ ಸೆಲೆಬ್ರಿಟಿಗಳ ದಂಡೆ ಬರುತ್ತೆ ಎನ್ನಲಾಗಿದೆ.
ಇನ್ನು ಏಪ್ರಿಲ್ 17 ಆಲಿಯಾ ಮತ್ತು ರಣಬೀರ್ ಸಪ್ತಪದಿ ತುಳಿಯಲಿದ್ದು, ಮದುವೆಗೆ 200 ಬೌನ್ಸರ್ಗಳನ್ನು ನೇಮಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಈ ಕುರಿತು ಆಲಿಯಾ ಸೋದರ ಸಂಬಂಧಿ ರಾಹುಲ್ ಭಟ್ ಮಾಹಿತಿ ನೀಡಿದ್ದು, ಆಲಿಯಾ ಮತ್ತು ರಣಬೀರ್ ಮದುವೆಯ ಭದ್ರತೆಯನ್ನು ಯೂಸುಫ್ ಭಾಯ್ ವಹಿಸಿಕೊಂಡಿದ್ದು, ಸುಮಾರು 200 ಬೌನ್ಸರ್ಗಳನ್ನು ಕರೆಸಲಾಗಿದೆ ಎಂದು ತಿಳಿಸಿದ್ದಾರೆ.