ಮುಂಬೈ, ಮಾ 30 (DaijiworldNews/DB): ಸೆಲೆಬ್ರಿಟಿಗಳ ಜೀವನದಲ್ಲಿ ವಿಚ್ಛೇದನ, ಎರಡು, ಮೂರನೇ ಮದುವೆಯೆಲ್ಲಾ ತುಂಬಾ ಕಾಮನ್ ಎಂಬಂತಾಗಿದೆ. ಎರಡನೇ ಮದುವೆಯ ಬಳಿಕ ಮಾಜಿ ಮತ್ತು ಹಾಲಿ ಪತಿ/ಪತ್ನಿಯರು ಪರಸ್ಪರ ಹೇಗಿರುತ್ತಾರೆ ಎಂಬುದೇ ಕುತೂಹಲ. ಅಂತಹುದೇ ಸುದ್ದಿಯೊಂದು ಇಲ್ಲಿದೆ. ಪತಿಯ ಮಾಜಿ ಪತ್ನಿಯ ಮಗಳಿಗೆ ಬರ್ತ್ ಡೇ ವಿಶ್ ಮಾಡಿ ದಿಯಾ ಮಿರ್ಜಾ ಸಖತ್ ಸುದ್ದಿಯಾಗಿದ್ದಾರೆ.
ಇಂದು ದಿಯಾ ಮಿರ್ಜಾರ ಪತಿ ವೈಭವ್ ರೇಖಿ ಅವರ ಮೊದಲ ಪತ್ನಿ ಸುನೈನಾ ರೇಖಿ ಅವರ ಪುತ್ರಿ ಸಮೈರಾ ರೇಖಿ ಅವರ ಬರ್ತ್ ಡೇ. ಈ ಹಿನ್ನೆಲೆಯಲ್ಲಿ ದಿಯಾ ಸ್ಪೆಷಲ್ ಆಗಿಯೇ ಶುಭಾಶಯ ಕೋರಿದ್ದಾರೆ. 'ನನಗಾಗಿ ನಿನ್ನ ಮನೆ ಹಾಗೂ ಹೃದಯದ ಬಾಗಿಲು ಮುಕ್ತವಾಗಿಟ್ಟದ್ದಕ್ಕೆ ಧನ್ಯವಾದ. ನೀನು ನನ್ನ ಪಾಲಿಗೆ ತುಂಬಾ ಸ್ಪೆಷಲ್' ಎಂದು ದಿಯಾ ಮಿರ್ಜಾ ಇನ್ ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.
ದಿಯಾ ಮಿರ್ಜಾ ಮೊದಲ ಪತಿ ಸಾಹಿಲ್ ಸಂಘ ಅವರಿಂದ ವಿಚ್ಛೇದನ ಪಡೆದ ವೈಭವ್ ರೇಖಿ ಜೊತೆ 2021ರ ಫೆಬ್ರವರಿಯಲ್ಲಿ ವೈಭವ್ ರೇಖಿಯನ್ನು ವಿವಾಹವಾಗಿದ್ದರು. ಈ ಮದುವೆಗೆ ವೈಭವ್ ಮೊದಲ ಪತ್ನಿಯ ಮಗಳು ಸಮೈರಾ ಕೂಡಾ ಸಾಕ್ಷಿಯಾಗಿದ್ದು, ಪ್ರೀತಿ ಸಂದೇಶ ಸಾರುವ ಬೋರ್ಡ್ ಹಿಡಿದು ಸಂಭ್ರಮ ವ್ಯಕ್ತಪಡಿಸಿದ್ದಳು. ಅಲ್ಲದೆ, ವೈಭವ್ ಮೊದಲ ಪತ್ನಿ ಸುನೈನಾ ಕೂಡಾ ಈ ಮದುವೆಗೆ ಶುಭ ಕೋರಿದ್ದರು.
ದಿಯಾ ಮಿರ್ಜಾ ಮತ್ತು ಸಮೈರಾ ತುಂಬಾ ಆತ್ಮೀಯರು. ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಇಬ್ಬರು ಜೊತೆಗಿರುವ ಹಲವಾರು ಫೋಟೋಗಳನ್ನು ಕೂಡಾ ಶೇರ್ ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಆಕೆ ವಿಶೇಷವಾಗಿ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.