ಮುಂಬೈ, ಮಾ 27 (DaijiworldNews/DB): ಸಿನೆಮಾ ನಟರು ದಿನಕ್ಕೊಂದು ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಒಂದೊಂದು ಸಿನೆಮಾಗೂ ಒಂದೊಂದು ಸ್ಟೈಲ್ ಇದ್ದೇ ಇರುತ್ತದೆ. ಅದು ಹೇರ್ ಸ್ಟೈಲ್, ಬಾಡಿ ಸ್ಟೈಲ್ ಅಥವಾ ಇನ್ನೇನೇನೋ.
ವಯಸ್ಸಾದವರೂ ತಮ್ಮ ಹೊಸ ಸ್ಟೈಲ್ ಗಳಿಂದಾಗಿ ಇನ್ನೂ ಹರೆಯದ ಯುವಕ-ಯುವತಿಯರಂತೆ ಕಾಣುವುದು ಸಾಮಾನ್ಯ. ಅದೇ ಲುಕ್ ನಲ್ಲಿ ಕಾಣುವ ಸರದಿ ಈಗ ನಟ ಶಾರೂಖ್ ಖಾನ್ ಅವರದು.
ವಯಸ್ಸು 56 ಆದರೂ ಇನ್ನೂ 18ರ ಹುಡುಗನಂತೆ ತಮ್ಮ ದೇಹವನ್ನು ಕಮ್ಬ್ಯಾಕ್ ಮಾಡಿಕೊಂಡಿದ್ದಾರೆ ಶಾರೂಖ್. ಶಾರೂಖ್ ತಮ್ಮ ’ಪಠಾಣ್’ ಸಿನೆಮಾಕ್ಕಾಗಿ 8 ಪ್ಯಾಕ್ ಅವತಾರದಲ್ಲಿ ಮಿಂಚಿದ್ದಾರೆ. ಅಭಿಮಾನಿಗಳಂತೂ ಶಾರೂಕ್ ಹೊಸ ಸ್ಟೈಲ್ಗೆ ಸಿಕ್ಕಾಪಟ್ಟೆ ಫಿದಾ ಆಗಿದ್ದಾರೆ. ತಮ್ಮ ಹೊಸ ಸ್ಟೈಲ್ ನ ಫೋಟೋಗಳನ್ನು ಸ್ವತಃ ಶಾರೂಖ್ ಅವರೇ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಸಿನಿ ತಾರೆಯರು ಕೂಡಾ ಕಮೆಂಟ್ ಮಾಡಿದ್ದು, ಶಾರೂಖ್ ಹೊಸ ಲುಕ್ ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಅಭಿಮಾನಿಗಳು ಯುವಕರನ್ನೇ ನಾಚಿಸುವಂತಿದೆ ಎಂದು ಕಮೆಂಟ್ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಅಬ್ರಹಾಂ ಕೂಡಾ ’ಪಠಾಣ್’ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇಬ್ಬರ ಫೋಟೋಗಳು ಈ ಹಿಂದೆಯೇ ವೈರಲ್ ಆಗಿದ್ದವು. ಇದೀಗ ಶಾರೂಕ್ ಸರದಿ. ಶಾರೂಕ್ 8 ಪ್ಯಾಕ್ ಸ್ಟೈಲ್ ನೋಡಿದ ಮೇಲೆ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ.