ಬೆಂಗಳೂರು, ಮಾ 26 (DaijiworldNews/HR): ನಟಿ ರಶ್ಮಿಕಾ ಮಂದಣ್ಣ ಅವರು ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸುತ್ತಾ ಬ್ಯುಸಿ ಇದ್ದರೂ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವುದು ತಪ್ಪಿಸಿಲ್ಲ. ಆಗಾಗ ವಿಡಿಯೋ ಅಥವಾ ಫೋಟೋಗಳನ್ನುಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ.
ರಶ್ಮಿಕಾ ಹಂಚಿಕೊಳ್ಳುವ ಪೋಟೊಗಳಿಗೆ ಅಭಿಮಾನಿಗ್ಳು ಮೆಚ್ಚುಗೆ ಸೂಚಿಸುತ್ತಾರೆ. ಆದರೆ ಈ ವಿಚಾರದಲ್ಲಿ ರಶ್ಮಿಕಾ ಅವರಿಗೆ ಯಾಕೋ ಕೊಂಚ ಅನುಮಾನ ಬಂದಂತಿದ್ದು, ಇತ್ತೀಚೆಗೆ ಒಂದು ಫೋಟೋ ಶೇರ್ ಮಾಡುವಾಗ 'ನಿಮ್ಮಲ್ಲಿ ತುಂಬ ಜನರಿಗೆ ಇದು ಇಷ್ಟ ಆಗಲ್ಲ' ಎಂದು ಬರೆದುಕೊಂಡಿದ್ದಾರೆ.
ಇನ್ನು ರಶ್ಮಿಕಾ ಅವರಿಗೆ ಫಿಟ್ನೆಸ್ ಬಗ್ಗೆ ಸಿಕ್ಕಾಪಟ್ಟೆ ಕಾಳಜಿ. ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ವರ್ಕೌಟ್ ತಪ್ಪಿಸುವಂತಿಲ್ಲ. ಊಟ-ತಿಂಡಿಯ ಮೇಲೂ ಹಿಡಿತ ಇರಲೇಬೇಕು. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೊಸ ಫೋಟೋ ಹಂಚಿಕೊಂಡಿರುವ ಅವರು, ಈ ಫೋಟೋವನ್ನು ನಾನು ಪೋಸ್ಟ್ ಮಾಡಬಹುದೋ ಇಲ್ಲವೋ ಗೊತ್ತಿಲ್ಲ. ನಿಮ್ಮಲ್ಲಿ ತುಂಬ ಜನರು ಇದನ್ನು ಇಷ್ಟಪಡುವುದಿಲ್ಲ. ನಿರಂತರ ಪ್ರಯತ್ನವೇ ನಿಮ್ಮ ಫಿಟ್ನೆಸ್ ಗೋಲ್ಗೆ ತುಂಬ ಮುಖ್ಯವಾದ ಅಂಶ. ವರ್ಕೌಟ್, ಡಯೆಟ್, ಆಲೋಚನೆಗಳು ಮತ್ತು ಜರ್ನಿ ನಿರಂತರವಾಗಿ ಇರಲಿ ಹಾಗೂ ಅದನ್ನು ಎಂಜಾಯ್ ಮಾಡಿ ಎಂದು ರೆದುಕೊಂಡಿದ್ದಾರೆ.
ಜಿಮ್ನಲ್ಲಿ ವರ್ಕೌಟ್ ಮಾಡುವ ಪೋಟೊವನ್ನು ರಶ್ಮಿಕಾ ಮಂದಣ್ಣ ಅವರು ಹಂಚಿಕೊಂಡಿದ್ದು, ಅದರಲ್ಲಿ ಅವರ ಫಿಟ್ನೆಸ್ ಎದ್ದು ಕಾಣುತ್ತದೆ.