ನವದೆಹಲಿ, ಮಾ 24 (DaijiworldNews/DB): ಚೊಚ್ಚಲ ಮಗುವಿನ ತಾಯಿಯಾಗಿರುವ ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾಗೆ ಈಗ ಹೊರಗಡೆ ಎಲ್ಲೂ ಹೋಗಲಾಗುತ್ತಿಲ್ಲವಂತೆ. ಆದರೆ ಇದಕ್ಕೆ ಕಾರಣ ಏನೆಂಬುದನ್ನು ಮಾತ್ರ ಅವರು ತಿಳಿಸಿಲ್ಲ. ಪ್ರಿಯಾಂಕಾ ಮಗುವಿನ ಲಾಲನೆ-ಪಾಲನೆಗೇ ಹೆಚ್ಚು ಒತ್ತು ಕೊಡುತ್ತಿರಬಹುದೇ ಎಂದು ಅವರ ಈ ಮಾತಿನ ಬಳಿಕ ಅಭಿಮಾನಿಗಳು ಊಹಿಸಿದ್ದಾರೆ.
ಪ್ರಿ-ಆಸ್ಕರ್ಸ್ ಸಮಾರಂಭದಲ್ಲಿ ಬುಧವಾರ ಭಾಗವಹಿಸಿದ್ದ ಪ್ರಿಯಾಂಕಾ ಕಪ್ಪು ಸೀರೆಯಲ್ಲಿ ಮಿರಿ ಮಿರಿ ಮಿಂಚುತ್ತಿದ್ದರು. ಸಮಾರಂಭದಲ್ಲಿ ಪ್ರಿಯಾಂಕ ತಮ್ಮ ಜೀವನದ ಜರ್ನಿ ಬಗ್ಗೆ ಮಾತನಾಡುತ್ತಾ, ಇಂದು ನಾನು ಸಹದ್ಯೋಗಿಗಳು, ದಕ್ಷಿಣ ಏಶಿಯಾದ ಪ್ರತಿಷ್ಠಿತರ ನಡುವೆ ನಿಂತಿದ್ದೇನೆ. ನಾನು ತುಂಬಾ ರೋಮಾಂಚನಕ್ಕೊಳಗಾಗಿದ್ದೇನೆ. ಅಷ್ಟೇ ಭಾವಜೀವಿ ಕೂಡಾ. ನನಗೆ ಸದ್ಯ ಎಲ್ಲಿಗೂ ಹೊರಗಡೆ ಹೋಗಲು ಸಾಧ್ಯವಾಗುತ್ತಿಲ್ಲ. ಆದರೂ ನಿಮ್ಮನ್ನೆಲ್ಲ ಪ್ರೋತ್ಸಾಹಿಸಲು ತಡರಾತ್ರಿ ವೇಳೆ ಇಲ್ಲಿಗೆ ಆಗಮಿಸಿದ್ದೇನೆ ಎಂದಿದ್ದಾರೆ.
ನನಗೆ ಎಲ್ಲಿಗೂ ಹೋಗಲಾಗುತ್ತಿಲ್ಲ ಎಂದು ಅವರಾಡಿದ ಮಾತುಗಳು ಸದ್ಯ ಅಭಿಮಾನಿಗಳಲ್ಲಿ ವಿವಿಧ ಊಹೆಗಳಿಗೆ ಕಾರಣವಾಗಿದ್ದು, ಬಹುತೇಕರು ಪ್ರಿಯಾಂಕಾ ಪ್ರಸ್ತುತ ಹೊಸ ತಾಯಿ. ತಾಯಿಯಾಗಿ ಮಗುವಿನ ಲಾಲನೆಗೆ ಹೆಚ್ಚು ಒತ್ತು ನೀಡಬೇಕಾಗುತ್ತದೆ. ಅಲ್ಲದೆ, ಸಣ್ಣ ಮಗುವಾಗಿರುವ ಕಾರಣ ಮಗುವಿಗೆ ಅಮ್ಮನ ಅಪ್ಪುಗೆ ಸದಾ ಇರಬೇಕಾಗಿರುವುದರಿಂದ ಪ್ರಿಯಾಂಕಾ ಮಗುವನ್ನು ನೋಡಿಕೊಳ್ಳುವುದರಲ್ಲೇ ಸಮಯ ಕಳೆಯುತ್ತಿದ್ದಾರೇನೋ ಎಂದು ಊಹಿಸಿದ್ದಾರೆ.
ಅದೇನೇ ಇರಲಿ, ಅಭಿಮಾನಿಗಳ ಊಹೆ ನಿಜವೇ ಅಥವಾ ಪ್ರಿಯಾಂಕಾ ಹೊರಗಡೆ ಹೋಗಲು ಸಾಧ್ಯವಾಗದೇ ಇರಲು ಬೇರೇನಾದರೂ ಕಾರಣಗಳಿವೆಯೇ ಎಂಬುದನ್ನು ಸ್ವತಃ ಪ್ರಿಯಾಂಕಾ ಅವರೇ ಹೇಳಬೇಕಷ್ಟೇ.