ಮುಂಬೈ, ಮಾ 20 (DaijiworldNews/HR): ಬಾಲಿವುಡ್ ನಟಿ ಸನ್ನಿಲಿಯೋನ್ ಮೂರು ಮಕ್ಕಳ ತಾಯಿಯಾಗಿದ್ದು, ಇಬ್ಬರಲ್ಲಿ ಅಶೆರ್ ಹಾಗೂ ನೋಹಾ ಮಕ್ಕಳನ್ನು ಬಾಡಿಗೆ ತಾಯ್ತನದಿಂದ ದಂಪತಿ ಪಡೆದುಕೊಂಡಿದ್ದಾರೆ. ಇಬ್ಬರ ಜೊತೆಗೆ ನಿಶಾ ದತ್ತುಪುತ್ರಿಯಿದ್ದಾಳೆ.
ದಂಪತಿಗಳು ಇತ್ತೀಚೆಗೆ ಮಕ್ಕಳ ಜೊತೆ ಫೋಟೋ ಶೇರ್ ಮಾಡಿಕೊಂಡಿದ್ದು, ದತ್ತುಪುತ್ರಿ ಕೈ ಹಿಡಿದುಕೊಂಡಿರಲಿಲ್ಲ. ಇದನ್ನು ಗಮನಿಸಿದ ನೆಟ್ಟಿಗರು, ಸನ್ನಿ ದತ್ತು ಪುತ್ರಿಯನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಈ ಫೋಟೋವನ್ನು ಟ್ರೋಲ್ ಮಾಡುತ್ತಿದ್ದಾರೆ.
ಇನ್ನು ಟ್ರೋಲ್ನಿಂದ ಬೇಸರಗೊಂಡ ಸನ್ನಿಲಿಯೋನ್ ಪೋಷಕರಾದವರಿಗೆ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಆಲೋಚನೆ ಇರುತ್ತೆ. ಕೇವಲ ಒಂದು ಫೋಟೋ ನೋಡಿ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಿದ್ದಾರೆ ಎಂದು ಅಳಿಯುವುದು ಸರಿಯಲ್ಲ ಎಂಬುದಾಗಿ ಖಡಕ್ ಉತ್ತರ ನೀಡಿದ್ದಾರೆ.