ಮುಂಬೈ, ಮಾ 19 (DaijiworldNews/DB): ಫ್ಯಾಶನ್ ಆಯ್ಕೆಯಲ್ಲಿ ನಟಿ ಅನನ್ಯಾ ಪಾಂಡೆ ಯಾವಾಗಲೂ ಒಂದೆಜ್ಜೆ ಮುಂದೆ. ಹೊಸ ಹೊಸ ಪ್ರಯೋಗಗಳನ್ನು ತಮ್ಮ ಧಿರಿಸಿನಲ್ಲಿ ಕಾಯ್ದುಕೊಳ್ಳುತ್ತಲೇ ಇರುತ್ತಾರೆ.
ಇತ್ತೀಚೆಗೆ ಧರ್ಮ ಪ್ರೊಡಕ್ಷನ್ಸ್ ನ ಸಿಇಓ ಅಪೂರ್ವಾ ಮೆಹ್ತಾ ಅವರ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಅನನ್ಯಾ ಧರಿಸಿದ್ದ ಬೋಲ್ಡ್ ಡ್ರೆಸ್ ಸದ್ಯ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು, ಟ್ರೋಲಿಗರು ’ರಿಪ್ ಫ್ಯಾಶನ್ ಎಂದು ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಇಷ್ಟೆಲ್ಲಾ ಟ್ರೋಲ್ ಆಗುವುದಕ್ಕೆ ಅನನ್ಯಾ ಅದೆಂತಾ ಬಟ್ಟೆ ತೊಟ್ಟಿರಬಹುದು ಎಂಬುದೇ ಕುತೂಹಲ.
23 ವರ್ಷದ ನಟಿ ಅನನ್ಯಾ ಪಾಂಡೆ ಸೆಮಿ ಟ್ರಾನ್ಸ್ ಪರೆಂಟ್ ಆಗಿರುವ ಅತಿ ತೆಳುವಾದ ಕಪ್ಪು ಬಟ್ಟೆಯನ್ನು ಹುಟ್ಟುಹಬ್ಬ ಪಾರ್ಟಿಯಲ್ಲಿ ಧರಿಸಿದ್ದರು. ಈ ಡ್ರೆಸ್ ನಲ್ಲಿ ವೀಡಿಯೋಗೆ ಪೋಸ್ ನೀಡುತ್ತಿರುವ ವೀಡಿಯೋವನ್ನೂ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಡ್ರೆಸ್ ನಲ್ಲಿ ಅನನ್ಯಾ ಗ್ಲಾಮರಸ್ ಲುಕ್ ನಲ್ಲಿ ಮಿಂಚುತ್ತಿದ್ದರೂ, ಟ್ರೋಲ್ ಗೆ ಆಹಾರವಾಗಿದ್ದಾರೆ. ಅಭಿಮಾನಿಗಳಿಗೆ ಅವರ ಈ ಬಟ್ಟೆ ಇಷ್ಟವಾಗಿಲ್ಲ. ಅದಕ್ಕಾಗಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.
ಒಬ್ಬರು ’ರಿಪ್ ಫ್ಯಾಶನ್ ಸೆನ್ಸ್’ ಅಂತ ಬರೆದಿದ್ದರೆ, ಮತ್ತೊಬ್ಬರು ’ಅನನ್ಯಾಗೆ ಫ್ಯಾಶನ್ ಬಟ್ಟೆಯ ಕೊರತೆಯಾಗಿದೆ’ ಎಂದು ಜರಿದಿದ್ದಾರೆ. ಇನ್ನೊಬ್ಬರು ’ಇಂತಹ ಬಟ್ಟೆ ಧರಿಸಿ ನಿಮ್ಮ ನಿಜವಾದ ಅಂದವನ್ನು ಯಾಕೆ ಕಳೆದುಕೊಳ್ಳುತ್ತೀರಿ’ ಎಂದು ಕೇಳಿದ್ದಾರೆ. ಅನನ್ಯಾ ಹಾಲಿವುಡ್ ಫ್ಯಾಶನ್ ನ್ನು ನಕಲು ಮಾಡಲು ಯತ್ನಿಸುತ್ತಿದ್ದಾರೆ ಎಂದೂ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಅನನ್ಯಾ ಹೊಸ ಫ್ಯಾಶನ್ ಪ್ರಯೋಗವು ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದೆ.