ಸ್ಯಾನ್ ಜುವಾನ್, ಮಾ 17 (DaijiworldNews/HR): ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ ವಿಶ್ವ ಸುಂದರಿ 2021 ಪ್ರಶಸ್ತಿಯನ್ನು ಪೋಲೆಂಡ್ನ ಕರೋಲಿನಾ ಬಿಲಾವ್ಸ್ಕಾ ಅವರು ಗೆದ್ದಿದ್ದಾರೆ.
ಯುನೈಟೆಡ್ ಸ್ಟೇಟ್ಸ್ನ ಭಾರತೀಯ-ಅಮೇರಿಕನ್ ಶ್ರೀ ಸೈನಿ ಮೊದಲ ರನ್ನರ್-ಅಪ್ ಪ್ರಶಸ್ತಿಯನ್ನು ಪಡೆದಿದ್ದು, ಕೋಟ್ ಡಿ'ಐವೋರ್ನ ಒಲಿವಿಯಾ ಯೇಸ್ ಎರಡನೇ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ಕೊರೊನಾ ಕಾರಣದಿಂದಾಗಿ 2020 ರಲ್ಲಿ ವಿಳಂಬವಾದ ನಂತರ ಪೋರ್ಟೊ ರಿಕೊದ ಸ್ಯಾನ್ ಜುವಾನ್ನಲ್ಲಿ ಮಾರ್ಚ್ 16 ರಂದು ಪ್ರದರ್ಶನ ನಡೆಯಿತು.
ಇನ್ನು ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2020 ಮಾನಸಾ ವಾರಣಾಸಿ ಮಿಸ್ ವರ್ಲ್ಡ್ 2021 ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, ಟಾಪ್ 13 ಸ್ಪರ್ಧಿಗಳನ್ನು ತಲುಪಿದ್ದು, ಟಾಪ್ 6 ಫೈನಲಿಸ್ಟ್ಗಳಿಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.