ಮುಂಬೈ, ಮಾ 16 (DaijiworldNews/DB): ಬಾಲಿವುಡ್ ಚೆಲುವೆ ಕತ್ರಿನಾ ಕೈಫ್ ತಮ್ಮ ಪತಿಯೊಂದಿಗಿನ ಮುದ್ದಾದ ರೊಮ್ಯಾಂಟಿಕ್ ಸೆಲ್ಫೀ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಸದ್ಯ ಈ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಕಳೆದ ಡಿಸೆಂಬರ್ ನಲ್ಲಿ ಹಸೆಮಣೆ ಏರಿದ್ದ ಕತ್ರಿನಾ-ವಿಕ್ಕಿ ಕೌಶಲ್ ಜೋಡಿ ಮದುವೆಯಾದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡದ್ದೇ ಅಪರೂಪ. ಇಬ್ಬರೂ ವಿವಾಹದ ಬಳಿಕ ಸಿನೆಮಾಗಳನ್ನು ಬ್ಯುಸಿ ಇದ್ದ ಕಾರಣ ಸಮಯದ ಕೊರತೆಯೂ ಎದುರಾಗಿತ್ತು. ಇದೀಗ ಮತ್ತೆ ಸಾಮಾಜಿಕ ತಾಣಗಳಲ್ಲಿ ಕಾಣಿಸಿಕೊಂಡಿರುವ ಜೋಡಿ ರೊಮ್ಯಾಂಟಿಕ್ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳ ಮನ ತಣಿಸಿದೆ.
ಮೊದಲ ಫೋಟೋದಲ್ಲಿ ಸ್ವಲ್ಪ ಕೋಪಗೊಂಡಂತೆ ಇರುವ ಕತ್ರಿನಾ ’ನಾನು ನಿದ್ದೆಯ ಮೂಡ್ ನಲ್ಲಿ ಇದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಎರಡನೇ ಫೋಟೋದಲ್ಲಿ ಹಾರ್ಟ್ ಇಮೋಜಿ ಹಾಕಿದ್ದು, ಪತಿ-ಪತ್ನಿ ಇಬ್ಬರೂ ನಗು ನಗುತ್ತಾ ಪೋಸ್ ಕೊಟ್ಟಿದ್ದಾರೆ. ಈ ಎರಡೂ ಫೋಟೋಗಳು ಸದ್ಯ ಸಿಕ್ಕಾ ಪಟ್ಟೆ ವೈರಲ್ ಆಗುತ್ತಿದೆ.
ಇದಲ್ಲದೆ ಬೀಚ್ ನಲ್ಲಿ ಪಿಂಕ್ ಬಿಕಿನಿ ಸೆಟ್ ತೊಟ್ಟ ಫೋಟೋವನ್ನು ಕೂಡಾ ಅವರು ಶೇರ್ ಮಾಡಿದ್ದಾರೆ. ಸದ್ಯ ಕತ್ರಿನಾ ಸಲ್ಮಾನ್ ಖಾನ್ ಜೊತೆಗೆ ’ಟೈಗರ್ 3' ಚಿತ್ರದಲ್ಲಿ ಬ್ಯುಸಿಯಾಗಿದ್ದು, ವಿಕ್ಕಿ ಅವರು ಕೂಡಾ ಇನ್ನೊಂದು ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.