ಮುಂಬೈ, ಮಾ 05 (DaijiworldNews/DB): ಬಾಲಿವುಡ್ ನಟ ರಣ್ ವೀರ್ ಸಿಂಗ್ ಹಲವು ಬಾರಿ ಕಣ್ಣು ಕುಕ್ಕುವ ಉಡುಪುಗಳನ್ನು ತೊಟ್ಟು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುವುದು ಮಾಮೂಲಿ. ರಣ್ವೀರ್ ಸಿಂಗ್ ರವರ ವಿಚಿತ್ರ ಫ್ಯಾಶನ್ ಸೆನ್ಸ್ ಜಗಜ್ಜಾಹೀರ ವಿಚಾರ. ಆದರೆ ಇದೀಗ ರಣವೀರ್ ಅವರ ವಿಚಿತ್ರ ಫ್ಯಾಶನ್ ಸೆನ್ಸ್ ಅವರ ಪತ್ನಿ ನಟಿ ದೀಪಿಕಾ ಪಡುಕೋಣೆಗೂ ತಟ್ಟಿದೆ ಎಂದು ನೆಟ್ಟಿಗರು ಆಡಿಕೊಳ್ಳುತ್ತಿದ್ದಾರೆ.
ತಾವು ಧರಿಸಿದ ಕೆಂಪು ಬಣ್ಣದ ಪ್ಯಾಂಟ್ ನಿಂದಾಗಿ ದೀಪಿಕಾ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. "ಪಟಾನ್’ ಚಿತ್ರದ ಚಿತ್ರೀಕರಣ ಸಲುವಾಗಿ ಸ್ಪೈನ್ ಗೆ ತೆರಳಲು ದೀಪಿಕಾ ಸಹಿತ ಶಾರುಖ್ ಖಾನ್, ಜಾನ್ ಅಬ್ರಹ್ಮಾಂ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
ಈ ವೇಳೆ ದೀಪಿಕಾ ಕೆಂಪು ಬಣ್ಣ ಟೈಟ್ ಫಿಟ್ ಲೇಟೆಕ್ಸ್ ಪ್ಯಾಂಟ್ ಮತ್ತು ಅದೇ ಬಣ್ಣದ ಉದ್ದ ತೋಳಿನ ಶರ್ಟ್, ಕ್ಯಾಪ್ ಧರಿಸಿದ್ದರು. ಈ ಪ್ಯಾಂಟ್ ನೋಡಿದ ಅಭಿಮಾನಿಗಳು ದೀಪಿಕಾರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದು, ’ಅವರೊಬ್ಬ ಜೋಕ್ ತರ ಕಾಣುತ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.