ಮುಂಬೈ, ಮಾ 02 (DaijiworldNews/DB): ದಬಾಂಗ್ ಚಿತ್ರದ ನಾಯಕ ಸಲ್ಮಾನ್ ಖಾನ್ ಅವರು ಸೋನಾಕ್ಷಿ ಸಿನ್ಹಾ ಅವರನ್ನು ಗುಟ್ಟಾಗಿ ವಿವಾಹವಾಗಿದ್ದಾರಾ? ಇವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂಬ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ.
ಸಲ್ಮಾನ್ ಖಾನ್ ಅವರು ಬ್ಯಾಚುಲರ್ ಆಗಿಯೇ ಉಳಿದಿದ್ದು, ಮದುವೆಯೇ ಆಗುವುದಿಲ್ಲ ಎಂಬ ಸುದ್ದಿಗಳಿವೆ. ಅಲ್ಲದೆ ವೈರಲ್ ಫೋಟೋದ ಬಗ್ಗೆಯೂ ಅವರು ತುಟಿ ಬಿಚ್ಚಿಲ್ಲ. ಫೋಟೋದಲ್ಲಿ ಸಲ್ಮಾನ್ ಬಿಳಿ ಶೆರ್ವಾಣಿ ಧರಿಸಿದ್ದು, ಸೋನಾಕ್ಷಿ ಕೆಂಪು ಬಣ್ಣದ ಮದುಮಗಳ ಲೆಹೆಂಗಾದಲ್ಲಿ ಕಂಗೊಳಿಸುತ್ತಿದ್ದಾರೆ. ಇದೇ ಫೋಟೋ ಗಾಸಿಪ್ ಗೆ ಕಾರಣವಾಗಿರುವುದು.
ಆದರೆ ಇದೀಗ ವೈರಲ್ ಆಗಿರುವ ಫೋಟೋದ ಅಸಲಿಯತ್ತೇನೆಂದರೆ ಸಲ್ಮಾನ್-ಸೋನಾಕ್ಷಿ ಮದುವೆಯಾಗಿದ್ದಾರೆ ಎಂದು ತೋರಿಸಲಾದ ಫೋಟೋ ಫೋಟೋಶಾಪ್ ಮಾಡಿರುವುದಾಗಿದೆ ಮತ್ತು ಸಲ್ಮಾನ್ ಖಾನ್ ಈಗಲೂ ಬ್ಯಾಚುಲರ್ ಆಗಿಯೇ ಇದ್ದಾರೆ.
ಇತ್ತೀಚಿನ ಗಾಸಿಪ್ ಗಳ ಪ್ರಕಾರ ಸೋನಾಕ್ಷಿ ಸಿನ್ಹಾ ಅವರು "ನೋಟ್ ಬುಕ್’ ಚಿತ್ರದ ನಟ ಝಹೀರ್ ಇಕ್ಬಾಲ್ ಅವರೊಂದಿಗೆ ಸಂಬಂಧದಲ್ಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಸ್ಪಷ್ಟತೆ ನೀಡಿರುವ ಸೋನಾಕ್ಷಿ, ’ಝಹೀರ್ ತನ್ನ ಅತ್ಯುತ್ತಮ ಸ್ನೇಹಿತ. ನಾವಿಬ್ಬರೂ "ಡಬಲ್ ಎಕ್ಸ್ ಎಲ್’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೆವು’ ಎಂದು ತಿಳಿಸಿದ್ದಾರೆ.