ಬೆಂಗಳೂರು, ಮಾ 01 (DaijiworldNews/HR): ಸ್ಯಾಂಡಲ್ವುಡ್ ನಟಿ ಅಮೂಲ್ಯ ಅವರು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ನಟಿ ಅಮೂಲ್ಯ ಪತಿ ಜಗದೀಶ್ ಆರ್ ಚಂದ್ರ, ನಮಗೆ ಅವಳಿ ಗಂಡು ಮಕ್ಕಳು ಆಗಿದ್ದಾರೆ. ಅಮ್ಮ, ಮಕ್ಕಳು ಆರಾಮವಾಗಿದ್ದಾರೆ. ಎಲ್ಲರ ಪ್ರೀತಿ, ಹಾರೈಕೆಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ರಾಜಕೀಯ ಹಿನ್ನೆಲೆಯ ಕುಟುಂಬದವರಾದ ಜಗದೀಶ್ ಜತೆ 2017ರಲ್ಲಿ ಅಮೂಲ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇದೀಗ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದು, ಸಿನಿಮಾರಂಗದ ಎಲ್ಲಾ ಕಲಾವಿದರು, ಅಭಿಮಾನಿಗಳಿಂದ ಶುಭಾಶಯದ ಸುರಿಮಳೆ ಹರಿಯುತ್ತಿದೆ.