ಮಂಗಳೂರು, ಫೆ 25 (DaijiworldNews/HR): ಮಂಗಳೂರಿನ ಲಿಯೋನಿಲ್ಲಾ ಶ್ವೇತಾ ಡಿಸೋಜಾ ಅವರು ಹಿಂದಿ ಚಿತ್ರ 'ವೈ' ಮತ್ತು ಕನ್ನಡ ಸಿನಿಮಾ 'ಖಾಸಗಿ ಪುಟಗಳು' ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
ಹಿಂದಿ ಚಲನಚಿತ್ರ ವೈ ಅನ್ನು ಗಿರಿದೇವ್ ಹಾಸನ್ ನಿರ್ದೇಶಿಸಿದ್ದಾರೆ, ಯುವನ್ ಅವರು ಲಿಯೋನಿಲ್ಲಾ ಜೊತೆ ಜೋಡಿಯಾಗಿದ್ದಾರೆ. ಖಾಸಾಗಿ ಪುಟಗಳು ಚಿತ್ರವನ್ನು ಸಂತೋಷ್ ಶ್ರೀಕಂಠಪ್ಪ ನಿರ್ದೇಶಿಸಿದ್ದು, ಮಂಜು ಮತ್ತು ವೀಣಾ ನಿರ್ಮಿಸಿದರೆ, ವಿಶ್ವ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.
ಹೆಲೆನ್ ಡಿ ಸೋಜಾ ಮತ್ತು ಲಾರೆನ್ಸ್ ಡಿ ಸೋಜಾ ಅವರ ಪುತ್ರಿ ಲಿಯೋನಿಲ್ಲಾ ಶ್ವೇತಾ ಡಿಸೋಜಾ ಹುಟ್ಟೂರು ಬಜ್ಪೆ ಸಮೀಪದ ಪೆರ್ಮುದೆ. ಲಿಯೋನಿಲ್ಲಾ ತನ್ನ ಶಾಲಾ ಶಿಕ್ಷಣವನ್ನು ಮಾರ್ನಿಂಗ್ ಸ್ಟಾರ್ ಶಾಲೆ ಬಜ್ಪೆ ಮತ್ತು ಸೇಂಟ್ ಆನ್ಸ್ ಮಂಗಳೂರಿನಲ್ಲಿ ಪೂರ್ಣಗೊಳಿಸಿದ್ದು, ಕೆನರಾ ಕಾಲೇಜಿನಲ್ಲಿ ಪಿಯು ಮುಗಿಸಿ ಬೆಂಗಳೂರಿನ ಡಾ ಅಂಬೇಡ್ಕರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಮುಗಿಸಿ ಬಳಿಕ ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
"ನನ್ನ ಆರಂಭಿಕ ದಿನಗಳಿಂದಲೂ ನನ್ನ ಪೋಷಕರಿಂದ ಸಂಪೂರ್ಣ ಬೆಂಬಲ ಸಿಕ್ಕಿದ್ದು, ನಾನು ಕ್ರೀಡೆ, ನೃತ್ಯದಲ್ಲಿ ತೊಡಗಿಸಿಕೊಂಡಿದ್ದೇನೆ, ಆದರೆ ನನ್ನ ತಾಯಿ ಸ್ವತಃ ನಾಟಕ ಕಲಾವಿದೆಯಾಗಿದ್ದು ನನಗೆ ಸ್ಫೂರ್ತಿ ಮತ್ತು ನನ್ನ ಆತ್ಮವಿಶ್ವಾಸದ ಹಿಂದಿನ ಕಾರಣ" ಎಂದು ಲಿಯೋನಿಲ್ಲಾ ಹೇಳಿದ್ದಾರೆ.