ಮುಂಬೈ, ಫೆ 23 (DaijiworldNews/KP): ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಡುವಿನ ಪ್ರೇಮ್ ಕಹಾನಿ ಈಗ ಗುಟ್ಟಾಗಿ ಉಳಿದಿಲ್ಲ, ಆದರೆ ಈಗ ಮದುವೆ ವಿಚಾರದ ಬಗ್ಗೆ ಮೌನ ಮುರಿಸಿರುವ ಆಲಿಯಾ ಭಟ್ ಮದುವೆ ಸದ್ಯಕಿಲ್ಲ ಎಂದು ಹೇಳಿದ್ದಾರೆ.
ಸದ್ಯ ಅವರು 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದ ರಿಲೀಸ್ಗಾಗಿ ಎದುರು ನೋಡುತ್ತಿದ್ದಾರೆ. ಈ ಚಿತ್ರದ ಪ್ರಚಾರದ ಸಲುವಾಗಿ ಅವರು ಅನೇಕ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದು. ಈ ಸಂದರ್ಭದಲ್ಲಿ ಅವರಿಗೆ ಮದುವೆ ಬಗ್ಗೆಯೂ ಪ್ರಶ್ನೆ ಎದುರಾಗುತ್ತಿದೆ. ಅದಕ್ಕೆ ಅವರು ನೀಡಿದ ಉತ್ತರ ಕೊಂಚ ಅನುಮಾನಕ್ಕೆ ಕಾರಣ ಆಗಿದೆ.
ಹೌದು ಬಾಲಿವುಡ್ ಬಬಲ್’ ನಡೆಸಿದ ಸಂದರ್ಶನದಲ್ಲಿ ಬಾಲಿವುಡ್ನಲ್ಲಿ ತುಂಬಾ ಜನ ಮದುವೆ ಆಗುತ್ತಿದ್ದಾರೆ. ಹಾಗಾಗಿ ನಮ್ಮ ಬಗ್ಗೆಯೂ ಗಾಳಿ ಸುದ್ದಿ ಹರಡಿರಬಹುದು. ಸದ್ಯಕ್ಕೆ ಮದುವೆ ಇಲ್ಲ, ನಮಗೆ ಕಂಪರ್ಟ್ ಎನಿಸುವಂತಹ ಸಮಯ ಬಂದಾಗ ಮದುವೆ ಆಗುತ್ತೇವೆ ಎಂದಿದ್ದಾರೆ.
ಇನ್ನು ನಾನು ಕಂಡ ಆಕರ್ಷಕ ವ್ಯಕ್ತಿಗಳಲ್ಲಿ ರಣಬೀರ್ ಕಪೂರ್ ಕೂಡ ಒಬ್ಬರು. ಅವರ ಮೇಲೆ ನನಗೆ ತುಂಬ ಪ್ರೀತಿ-ಗೌರವ ಇದೆ ಎಂದು ಆಲಿಯಾ ಹೇಳಿದ್ದಾರೆ.
ಸೆಲೆಬ್ರಿಟಿಗಳು ಒಂದೆರಡು ಸಿನಿಮಾ ಒಟ್ಟಿಗೆ ಮಾಡಿ, ಅವು ರಿಲೀಸ್ ಆಗುವತನಕ ಕಪಲ್ ರೀತಿ ಓಡಾಡಿಕೊಂಡು, ನಂತರ ಬ್ರೇಕಪ್ ಮಾಡಿಕೊಂಡವರು ಹಲವರು ಇದ್ದಾರೆ. ಹಾಗಾಗಿ ಆಲಿಯಾ ಅವರಉತ್ತರ ಕೊಂಚ ಅನುಮಾನಕ್ಕೆ ಕಾರಣ ಆಗಿದೆ.