ಮುಂಬೈ, ಫೆ 16 (DaijiworldNews/KP): ಬಾಲಿವುಡ್ ನಟಿ ರಾಖಿ ಸಾವಂತ್, ರಿತೇಶ್ ಜೊತೆಗಿನ ಸಂಬಂಧವನ್ನು ಕೊನೆಗೊಳಿಸುವುದಾಗಿ ಫೆಬ್ರವರಿ 13 ರಂದು ಸೋಶಿಯಲ್ ಮೀಡಿಯಾ ಮೂಲಕವಾಗಿ ಹೇಳಿದ್ದಾರೆ.
ರಾಖಿ ಸಾವಂತ್ ಮದುವೆ ವಿಚಾರ ಮೊದಲಿನಿಂದಲೂ ನಿಗೂಢವಾಗಿಯೇ ಉಳಿದಿದ್ದು, ಹಿಂದಿ ಬಿಗ್ ಬಾಸ್ 15ನೇ ಸೀಸನ್ನಲ್ಲಿ ಇವರಿಬ್ಬರ ಮದುವೆ ವಿಚಾರ ಬಯಲು ಮಾಡಿದ್ದರು, ಆದರೆ ಈಗ ರಾಖಿ ಸಾವಂತ್ ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ಬಂದಿದೆ.
ಇವರಿಬ್ಬರ ಮದುವೆ ವಿಚಾರ ಬಯಲಾದ ಕೂಡಲೇ ರಿತೇಶ್ಗೆ ಕಾನೂನಿನ ಭಯ ಸೃಷ್ಟಿಯಾಗಿದೆ.
ರಿತೇಶ್ ಈ ಮೊದಲೆ ಮದುವೆಯಾಗಿದ್ದು, ಮೊದಲ ಹೆಂಡತಿಗೆ ವಿಚ್ಛೇದನ ನೀಡದೆ ರಾಖಿ ಸಾವಂತ್ ಜೊತೆ ಸಂಸಾರ ಶುರು ಮಾಡಿದ್ದರು, ಆದರೆ ಮೊದಲ ಪತ್ನಿ ಕಡೆಯಿಂದ ಸಂಕಷ್ಟ ಹೆಚ್ಚುವುದಕ್ಕೂ ಮುನ್ನವೇ ಅವರು ರಾಖಿ ಸಾವಂತ್ಗೆ ಕೈ ಕೊಟ್ಟು ಪರಾರಿ ಆಗಿದ್ದಾರೆ.
ಇದೀಗಾ ರಾಖಿ, ರಿತೇಶ್ನನ್ನು ನಂಬಿ ಮೋಸ ಹೋಗಿದ್ದೇನೆ ಎಂದು ಮಾಧ್ಯಮಗಳ ಎದುರಿನಲ್ಲಿ ಕಣ್ಣೀರು ಹಾಕುತ್ತಿದ್ದಾರೆ.
ಸದ್ಯ ರಾಖಿಯ ಸ್ಥಿತಿಯನ್ನು ಕಂಡು ಅಭಿಮಾನಿಗಳು ಅಯ್ಯೋ ಪಾಪ ಎನ್ನುತ್ತಿದ್ದಾರೆ.