ಮುಂಬೈ, ಫೆ 14 (DaijiworldNews/KP): ಬಾಲಿವುಡ್ ನಟಿ ಮಲೈಕಾ ಅರೋರಾ ಪ್ರೇಮಿಗಳ ದಿನದಂದು ಗೆಳೆಯ ಅರ್ಜುನ್ ಕಪೂರ್ ಅವರೊಂದಿಗಿನ ರೊಮ್ಯಾಂಟಿಕ್ ಪೋಟೋ ಹಂಚಿಕೊಳ್ಳುವ ಮೂಲಕ ಬ್ರೇಕ್ಅಪ್ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.
ಕಳೆದ 4 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಅರ್ಜುನ್-ಮಲೈಕಾ, ಇದೀಗ ನಟ ಅರ್ಜನ್ರೊಂದಿಗಿನ ರೊಮ್ಯಾಂಟಿಕ್ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳವ ಮೂಲಕ ಪ್ರೇಮಿಗಳ ದಿನಚಾರಣೆಯನ್ನು ಆಚರಿಸಿಕೊಂಡಿದ್ದಾರೆ.
ಅರ್ಜುನ್, ಮಲೈಕಾರ ಹಣೆಗೆ ಮುತ್ತಿಡುವ ಫೋಟೋಗೆ ಕೆಂಪು ಹೃದಯದ ಎಮೋಜಿ ಹಾಕಿ ’ನನ್ನವನು’ ಎಂಬ ಶೀಷೀಕೆಯನ್ನು ಬರೆದಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
ಈ ಜೋಡಿಯ ಡೇಟಿಂಗ್ ವದಂತಿಗಳು ಹುಟ್ಟಿಕೊಂಡಾಗಿನಿಂದ ತೀವ್ರ ಚರ್ಚೆಗೆ ಒಳಗಾಗಿದ್ದರು. ಇದರ ಬಳಿಕ 2019 ರಲ್ಲಿ ಅರ್ಜುನ್, ಮಲೈಕಾ ಅವರ ಜನ್ಮದಿನದಂದು ತಮ್ಮ ಸಂಬಂಧವನ್ನು ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಅಧಿಕೃತವಾಗಿ ಷೋಷಿಸಿದ್ದರು.
ಈ ಹಿಂದೆ ಇಬ್ಬರೂ ಮಾಲ್ಡೀವ್ಸ್ನಲ್ಲಿ ಒಟ್ಟಿಗೆ ಹೊಸ ವರ್ಷವನ್ನು ಆಚರಿಸಿದ್ದರು. ಆ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ಬರೆದು ಹಾಕಿದ್ದರು.
ಸದ್ಯ ಈ ಫೋಟೋ ಈಗ ವೈರಲ್ ಆಗಿದ್ದು, ಅಭಿಮಾನಿಗಳು, ಹಿತೈಷಿಗಳು ಹಾಗೂ ಬಾಲಿವುಡ್ ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.