ಮುಂಬೈ, ಫೆ 12 (DaijiworldNews/KP): ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಪತಿ ಬಾಲಿವುಡ್ ನಟ ರಣವೀರ್ ಸಿಂಗ್ನ ತುಟಿಗೆ ಮುತ್ತಿಡುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಈ ಹಿಂದೆ ಪತಿ ರಣವೀರ್ ಸಿಂಗ್ ಯಾವಾಗಲೂ ನನ್ನನ್ನು ತಬ್ಬಿಕೊಳ್ಳಲು ಮತ್ತು ಚುಂಬಿಸಲು ಇಷ್ಟಪಡುತ್ತಾರೆ ಎಂದು ಸಂದರ್ಶನದಲ್ಲಿ ದೀಪಿಕಾ ಹೇಳಿದ್ದರು, ಈಗ ಹೇಳಿಕೆಯಂತೆ ಫೋಟೋವೊಂದನ್ನು ರಣವೀರ್ ಸಿಂಗ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ದಂಪತಿಗಳು ಸಿನಿಮಾದಿಂದ ಸ್ವಲ್ಪಬ್ರೇಕ್ ತೆಗೆದುಕೊಂಡು ಬೀಚ್ನಲ್ಲಿ ಕಳೆಯುತ್ತಿದ್ದಾರೆ.
ಇನ್ನು ಫೋಟೋದಲ್ಲಿ ಇಬ್ಬರು ಬೀಚ್ನಲ್ಲಿ ನಿಂತಿದ್ದಾರೆ ರಣವೀರ್ನನ್ನು ದೀಪಿಕಾ ಗಟ್ಟಿಯಾಗಿ ತಬ್ಬಿಕೊಂಡು ತುಟಿಗೆ ಚುಂಬಿಸುತ್ತಿದ್ದಾರೆ, ಈ ಫೋಟೋವನ್ನು ದೀಪಿಕಾ ಪಡುಕೋಣೆ ಅಭಿನಯದ ಗೆಹ್ರೈಯಾನ್ ಶೀರ್ಷಿಕೆ ಗೀತೆ ಡೂಬೆಯ ಸಾಹಿತ್ಯದೊಂದಿಗೆ ಪೋಸ್ಟ್ ಮಾಡಿದ್ದಾರೆ.
ಸದ್ಯ ಈ ಈ ಫೋಟೋಗೆ ಬಾಲಿವುಡ್ ಸೆಲೆಬ್ರೆಟಿಗಳು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದಾರೆ.