ಬೆಂಗಳೂರು, ಫೆ 04(DaijiworldNews/KP): ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಪೌರಾಣಿಕ ಸಿನಿಮಾಗಳಿಂದ ತನ್ನದೇ ಆದ ಅಭಿಮಾನಿಗಳನ್ನು ಹೊಂದಿದ್ದು, ಇವರ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಕಾಯತ್ತಿರುತ್ತಾರೆ, ಇದೀಗಾ ‘ಗಂಗೂಬಾಯಿ ಕಾಠಿಯಾವಾಡಿ’ ಎಂಬ ಹೆಸರಿನಲ್ಲಿ ಗಂಗೂಬಾಯಿಯವರ ಜೀವನಾಧಾರಿತ ಸಿನಿಮಾದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಿದ್ದರಾಗಿದ್ದಾರೆ, ಆದರೆ ಈ ಸಿನಿಮಾ ತೆರೆ ಕಾಣುವ ಮೊದಲು ತನ್ನ ಹೆಸರಿನಿಂದಾಗಿ ವಿವಾದವನ್ನು ಸೃಷ್ಟಿ ಮಾಡಿದೆ.
ಸಂಜಯ್ ಲೀಲಾ ಬನ್ಸಾಲಿ ನಾಲ್ಕು ವರ್ಷದ ಬಳಿಕ ಅಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬರಲು ಸಿದ್ದರಾಗಿದ್ದಾರೆ. ಈ ಸಿನಿಮಾದ ಬಗ್ಗೆ ಪ್ರೇಕ್ಷಕರು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರವು ಕಾಮಾಟಿಪುರದ ಡಾನ್ಸರ್ ಆಗಿ ಮೆರೆದಿದ್ದ ಗಂಗೂಬಾಯಿ ಅವರ ಜೀವನ ಅಧಾರಿತ ಚಿತ್ರ ಇದಾಗಿದ್ದು, ಅವರು ಕಾಮಾಟಿಪುರದ ಡಾನ್ಸರ್ ಆಗುವುದಕ್ಕೂ ಮೊದಲು ವೇಶ್ಯೆಯಾಗಿದ್ದರು, ಇದನ್ನು ಸಂಜಯ್ ಲೀಲಾ ಬನ್ಸಾಲಿ ಹೇಗೆ ಕಟ್ಟಿಕೊಟ್ಟಿದ್ದಾರೆ ಎನ್ನುವ ಕುತೂಹಲದಲ್ಲಿ ಅಭಿಮಾನಿಗಳಿದ್ದಾರೆ, ಆದರೆ ಈ ಚಿತ್ರ ತೆರೆ ಕಾಣುವ ಮೊದಲೇ ವಿವಾದದ ಹಾದಿ ಹಿಡಿಯುವ ಸಾಧ್ಯತೆ ಇದೆ.
ಹಿರಿಯ ಗಾಯಕಿ ಗಂಗೂಬಾಯಿ ಹಾನಗಲ್ ಅವರು ಕರ್ನಾಟಕದ, ಕನ್ನಡದ ಹೆಮ್ಮೆ. ಸಂಗೀತ ಕ್ಷೇತ್ರದಲ್ಲಿ ಅಭೂತ ಪೂರ್ವ ಸಾಧನೆ ಮಾಡಿರುವ ಅವರಿಗೆ ಈ ಸಿನಿಮಾದಲ್ಲಿ ಅಪಮಾನ ಆಗಿದೆ, ಗಂಗೂಬಾಯಿ ಹಾನ್ಗಲ್ ಕನ್ನಡದ ಕೀರ್ತಿ. ಸಿನಿಮಾ ಹೆಸರು ಬದಲಿಸಬೇಕು ಎಂದು ಕನ್ನಡ ಜಾಗೃತಿ ವೇದಿಕೆ ಆಗ್ರಹಿಸಿದೆ. ಈ ಪ್ರತಿಭಟನೆ ಮುಂದೊಮ್ಮೆ ಜೋರಾದರೆ ಕರ್ನಾಟಕದಲ್ಲಿ ಸಿನಿಮಾ ರಿಲೀಸ್ಗೆ ಅಡ್ಡಿ ಉಂಟಾಗಬಹುದು.