ಮುಂಬೈ, ಫೆ 02(DaijiworldNews/KP): ಮದುವೆಯಾಗಿ 6 ವರ್ಷದ ಬಳಿಕ ಬಾಲಿವುಡ್ ನಟ ಕುನಾಲ್ ಕಪೂರ್ ಮತ್ತು ನೈನಾ ಬಚ್ಚನ್ ಮನೆಗೆ ವಾರಸ್ದಾರನ ಆಗಮನವಾಗಿದ್ದು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ.
ಕುನಾಲ್ ಕಪೂರ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಮಾತನಾಡದೇ ಯಾವಾಗಲೂ ರಹಸ್ಯವನ್ನು ಕಾಪಾಡುತ್ತಾ ಬರುತ್ತಿದ್ದು, ಆದರೆ ಮಗುವಿನ ಆಗಮನದ ಸಂತಸದಲ್ಲಿರುವ ಕುನಾಲ್ ಈ ಸಂತೋಷದ ವಿಚಾರವನ್ನು ಅಭಿಮಾನಿಗಳೊಟ್ಟಿಗೆ ಮನಬಿಚ್ಚಿ ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಯಾವಾಗಲೂ ಆ್ಯಕ್ಟೀವ್ ಆಗಿರುತ್ತಿದ್ದ ಕುನಾಲ್ ತಮ್ಮ ಖಾತೆಯಲ್ಲಿ ನೈನಾ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ, ನಾವಿಬ್ಬರು ತಂದೆ-ತಾಯಿಯಾಗಿದ್ದೇವೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಪ್ರೀತಿ ತೋರಿದ ಅಭಿಮಾನಿಗಳಿಗೆ, ಹಿತೈಷಿಗಳಿಗೆ ಮತ್ತು ದೇವರಿಗೆ ಕುನಾಲ್ ಧನ್ಯವಾದ ತಿಳಿಸಿದ್ದಾರೆ.
ಈ ಸುದ್ದಿಯನ್ನು ಹಂಚಿಕೊಂಡಿರುವ ಕುನಾಲ್ ಕಪೂರ್ ಮತ್ತು ನೈನಾ ಬಚ್ಚನ್ ದಂಪತಿಗಳಿಗೆ ಅಭಿಮಾನಿಗಳು, ಬಾಲಿವುಡ್ ಸೆಲೆಬ್ರಿಟಿಗಳು, ಹಿತೈಷಿಗಳು ಶುಭಾಶಯ ತಿಳಿಸಿದ್ದಾರೆ.