ಮುಂಬೈ, ಜ.30 (DaijiworldNews/KP): ಹಿಂದಿ ಬಿಗ್ ಬಾಸ್ ಶೋ ಕೊನೆಯ ಹಂತ ತಲುಪಿದ್ದು, ಇಂದು ಫಿನಾಲೆ ವೇದಿಕೆ ಸಜ್ಜಾಗಿದೆ. 'ಬಿಗ್ ಬಾಸ್ ಒಟಿಟಿ' ಮೂಲಕ ಹೆಸರು ಮಾಡಿದ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಮತ್ತ ಸಹ ಸ್ಪರ್ದಿ ರಾಕೇಶ್ ಬಾಪಟ್ರ ನಿಶ್ಚಿತಾರ್ಥವು ಬಿಗ್ ಬಾಸ್ ಮುಗಿದ ಕೂಡಲೇ ನೆರವೇರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಶಮಿತಾ ಹಾಗೂ ರಾಕೇಶ್ 'ಬಿಗ್ ಬಾಸ್ ಒಟಿಟಿ'ಯಲ್ಲಿ ಪರಿಚಯವಾಗಿ ಇಬ್ಬರ ಗೆಳೆತನ ಶೋ ಮುಗಿಯುವುದರೊಳಗೆ ಪ್ರೀತಿಗೆ ತಿರುಗಿತ್ತು, ಇವರಿಬ್ಬರೂ ಶೋ ಪೂರ್ಣಗೊಂಡ ಬಳಿಕವೂ ಒಟ್ಟಾಗಿ ಕಾಣಿಸಿಕೊಂಡರು. ನಂತರ ಬಿಗ್ ಬಾಸ್ 15ನೇ ಸೀಸನ್ಗೆ ಶಮಿತಾ ಮೊದಲು ಮನೆ ಒಳಗೆ ಬಂದಿದ್ದು, ವೈಲ್ಡ್ ಕಾರ್ಡ್ ಮೂಲಕ ರಾಕೇಶ್ ಬಂದಿದ್ದರು. ಆದರೆ ಅನಾರೋಗ್ಯ ಕಾರಣದಿಂದ ಅವರು ಹೊರ ನಡೆದಿದ್ದರು. ಇನ್ನು ಶಮಿತಾ ಈ ಬಾರಿ ಪ್ರಬಲ ಸ್ಪರ್ಧಿ ಎನಿಸಿಕೊಂಡಿದ್ದಾರೆ, ರೇಸ್ನಲ್ಲಿ ಐದು ಜನ ಇದ್ದು ಶಮಿತಾ ಗೆಲ್ಲುವ ಚಾನ್ಸ್ ಹೆಚ್ಚಿದೆ ಎನ್ನುವ ಅಭಿಪ್ರಾಯವನ್ನು ವೀಕ್ಷಕರ ಮತ್ತು ಅಭಿಮಾನಿ ವಲಯಗಳಲ್ಲಿ ಕೇಳಿ ಬಂದಿದೆ.
ಫಿನಾಲೆ ನೋಡಲು ರಾಕೇಶ್ ಮತ್ತು ಶಮಿತಾ ಶೆಟ್ಟಿ ತಾಯಿ ಸುನಂದಾ ಶೆಟ್ಟಿ ಶೋಗೆ ಆಗಮಿಸಿದ್ದು, ಈ ವೇಳೆ ಮಾತನಾಡಿದ ರಾಕೇಶ್, ಶಮಿತಾ ನಿನ್ನನ್ನು ಇವರೆಲ್ಲ ಕೇವಲ ಪ್ರೀತಿಸುತ್ತಾರೆ. ಆದರೆ ನಾನು ಹೆಚ್ಚು ಪ್ರೀತಿಸುತ್ತೇನೆ. ಈಗ ನಿಮ್ಮ ತಾಯಿ ನನಗೆ ಉತ್ತಮ ಸ್ನೇಹಿತರಾಗಿದ್ದಾರೆ. ಇನ್ನು ನೀವು ಎಲ್ಲರನ್ನೂ ಅಚ್ಚರಿ ಮುಡಿಸಿ ಫೈನಲ್ ಪ್ರವೇಶ ಮಾಡಿರುವಿರಿ ನಿಮಗೆ ಹ್ಯಾಟ್ಸ್ ಆಫ್. ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದರು.
ರಾಕೇಶ್ ಮಾತಿಗೆ ಪ್ರತಿಕ್ರಿಯೆ ನೀಡಿದ ಸಲ್ಮಾನ್ ಖಾನ್ ನಗೆ ಚಟಾಕಿ ಹಾರಿಸಿ, ತಾಯಿ ಎದುರು ಈ ರೀತಿ ಮಾತನಾಡಬಾರದು ರಾಕೇಶ್. ನಿಮ್ಮ ಕಿಡ್ನಿಯಲ್ಲಿದ್ದ ಕಲ್ಲನ್ನು ಇತ್ತೀಚೆಗಷ್ಟೇ ತೆಗೆಯಲಾಗಿದೆ ಎಂದರು. ರಾಕೇಶ್ಗೆ ಕಿಡ್ನ ಸ್ಟೋನ್ ಆಗಿತ್ತು. ಈ ಕಾರಣಕ್ಕೆ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಿತ್ತು. ಹೀಗಾಗಿ, ಅವರು ಬಿಗ್ಬಾಸ್ ಮನೆಯಿಂದ ಅರ್ಧಕ್ಕೆ ಹೊರ ನಡೆದಿದ್ದರು. ಇಬ್ಬರೂ ಶೀಘ್ರವೇ ಎಂಗೇಜ್ಮೆಂಟ್ ಮಾಡಿಕೊಳ್ಳಲಿದ್ದಾರೆ ಎಂಬ ಗಾಸಿಪ್ ಕೇಳಿಬರುತ್ತಿವೆ.