ಮುಂಬೈ, ಜ.29 (DaijiworldNews/KP): ಬಾಲಿವುಡ್ ನಟ ಅಮೀರ್ ಖಾನ್ ಮತ್ತು ಅವರ ಮಾಜಿ ಪತ್ನಿ ರೀನಾ ದತ್ತಾ ಅವರ ಪುತ್ರಿ ಇರಾ ಖಾನ್ ತಾನು ಅನುಭವಿಸಿದ ಮಾನಸಿಕ ಖಿನ್ನತೆ ಮತ್ತು ಇತರ ಸಮಸ್ಯೆಗಳ ಬಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ ಈ ಕಾರಣದಿಂದ ಅವರು ಹಲವು ಬಾರಿ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗುತ್ತಲೇ ಬಂದಿದ್ದು, ಆದರೆ ಈ ಬಾರಿ ಟ್ರೋಲಿಗರಿಗೆ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ, ಇದಕ್ಕೆ ಗಾಯಕಿ ಸೋನಾ ಮೋಹಪತ್ರಾ ಸಹ ಇರಾಗೆ ಸಾಥ್ ಕೊಟ್ಟಿದ್ದಾರೆ.
ಅಮೀರ್ ಖಾನ್ ಅವರ ಮಗಳು ಇರಾ ಅವರನ್ನು ಟ್ರೋಲಿಗರು, ಇರಾ ವಯಸ್ಸಾದವರು, ಹಂದಿಯಂತಹ ಮುಖವನ್ನು ಹೊಂದಿದ್ದಾರೆ ಎಂದು ಅಪಹಾಸ್ಯ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ಅವರು ನಾನು ಸಾರ್ವಜನಿಕವಾಗಿ ಮಾನಸಿಕ ಸಮಸ್ಯೆಗಳನ್ನು ಹಂಚಿಕೊಳ್ಳುವ ಬಗ್ಗೆ ಮಾತನಾಡುತ್ತಿದ್ದೇನೆ. ನೀವು ಏಕೆ ಈ ರೀತಿ ಟ್ರೋಲ್ ಮಾಡುತ್ತಿದ್ದೀರಾ ಎಂದು ನಿಮಗೆ ತಿಳಿದಿರಲಿ. ಸಾರ್ವಜನಿಕವಾಗಿ ಸಮಸ್ಯೆಗಳನ್ನು ಹೇಳಿಕೊಳ್ಳುವುದು ತುಂಬಾ ಮುಖ್ಯ. ಮಾನಸಿಕ ಸಮಸ್ಯೆಗಳ ಬಗ್ಗೆ ಮಾತನಾಡುವುದು ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮ ಪಡಿಸುವುದು ಬಹಳ ಮುಖ್ಯ. ನೀವು ನಿಮ್ಮ ಬಗ್ಗೆ ಮೊದಲು ಹೋರಾಟ ಮಾಡಿ ಖಡಕ್ ಆಗಿ ಹೇಳಿದ್ದಾರೆ.
ನಿಮ್ಮ ಸಮಸ್ಯೆಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ ಎಂದು ನಾನು ಎಲ್ಲರಿಗೂ ಹೇಳುವುದಿಲ್ಲ, ನಿಮ್ಮ ಸಮಸ್ಯೆಗಳ ಬಗ್ಗೆ ನಾನು ತೀರ್ಮಾನಿಸುವುದಿಲ್ಲ. ಸಾರ್ವಜನಿಕವಾಗಿ ಹಂಚಿಕೊಳ್ಳಲು ಆಸಕ್ತಿಯಿಲ್ಲದ ಸಾಕಷ್ಟು ಬುದ್ಧಿವಂತ, ಧೈರ್ಯಶಾಲಿ ಜನರನ್ನು ನಾನು ನೋಡಿದ್ದೇನೆ. ಇನ್ನು ಸೊಶಿಯಲ್ ಮೀಡಿಯಾದಲ್ಲಿ ದ್ವೇಷ ಮತ್ತು ಕಾಮೆಂಟ್ಗಳಿಂದ ತೊಂದರೆಗೊಳಗಾಗುವ ಸಾಕಷ್ಟು ಧೈರ್ಯಶಾಲಿ ಜನರನ್ನು ನಾನು ಬಲ್ಲೆ. ಆದ್ದರಿಂದ ಅವರು ತಮ್ಮ ಅಮೂಲ್ಯ ಶಕ್ತಿಯನ್ನು ಬೇರೆಡೆ ಕೇಂದ್ರೀಕರಿಸುತ್ತಾರೆ. ಟೇಕ್ ಕೇರ್ ಎಂದು ಟ್ರೋಲಿಗರಿಗೆ ಖಾರವಾಗಿ ಆಗಿ ಹೇಳಿದ್ದಾರೆ.
ಇರಾ ಮಾಡಿರುವ ವೀಡಿಯೋ ಪೋಸ್ಟ್ ಗಾಯಕಿ ಸೋನಾ ಮೋಹಪತ್ರಾ ‘ಗುಡ್, ಗೊಂಬೆ’ ಎಂದು ಬರೆದು ಕಾಮೆಂಟ್ ಮಾಡಿದ್ದಾರೆ.