ಗೋವ, ಜ.27 (DaijiworldNews/KP): ಬಹುಭಾಷಾ ನಟಿ ನಟಿ ಮೌನಿ ರಾಯ್ ತಮ್ಮ ಗೆಳೆಯ ಸೂರಜ್ ನಂಬಿಯಾರ್ ಅವರೊಂದಿಗೆ ಹಸೆಮಣೆ ಏರಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಮೌನಿ ಅವರು ಹಲವು ಸಮಯಗಳಿಂದ ಕೇರಳ ಮೂಲದ ಸೂರಜ್ ನಂಬಿಯಾರ್ ಅವರೊಂದಿಗೆ ಪ್ರೀತಿಯಲ್ಲಿದ್ದು, ಇತ್ತೀಚಿಗೆ ಇವರ ಮದುವೆ ಬಗ್ಗೆ ಹಲವು ಗ್ಯಾಸಿಪ್ಗಳು ಹರಿದಾಡಿತ್ತು, ಇದೀಗ ಗೋವಾದ ಒಂದು ರೆಸಾರ್ಟ್ನಲ್ಲಿ ಮೊದಲು ಮಲಯಾಳಿ ಪದ್ಧತಿಯಂತೆ ಇಂದು ಬೆಳಗ್ಗೆ ವಿವಾಹ ನಡೆಯಿತು. ಇನ್ನು ಸಂಜೆ ಬೆಂಗಾಲಿ ಸಂಪ್ರದಾಯದ ಪ್ರಕಾರ ವಿವಾಹ ಶಾಸ್ತ್ರಗಳನ್ನು ನೆರವೇರಿಸಲಾಗುವುದು ಎಂಬ ಮಾಹಿತಿ ಸಿಕ್ಕಿದೆ.
ಹಿಂದಿ ಕಿರುತೆರೆಯ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ಇವರು ಹಲವಾರು ಹಿಂದೆ ಧಾರಾವಾಹಿಯಲ್ಲಿ ಕಾಣಿಸಿಕೊಂಡು ಮನೆ ಮಾತಾಗಿದ್ದರು, ಹಿಂದಿಯ ಹಲವು ಖ್ಯಾತ ನಟರೊಂದಿಗೆ ಸಿನಿಮಾದಲ್ಲಿಯೂ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರು, ಅಲ್ಲದೆ ‘ಕೆಜಿಎಫ್: ಚಾಪ್ಟರ್ 1’ ಸಿನಿಮಾದ ‘ಗಲಿ ಗಲಿ ಮೇ’ ಹಾಡಿಗೆ ಯಶ್ ಜೊತೆ ಹೆಜ್ಜೆ ಹಾಕುವ ಮೂಲಕ ಇವರ ಖ್ಯಾತಿ ಇನ್ನಷ್ಟು ಹೆಚ್ಚಿತ್ತು. ಸದ್ಯ ಮದುವೆ ಸಲುವಾಗಿ ಬ್ರೇಕ್ ಪಡೆದುಕೊಂಡಿರುವ ಅವರು ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ.
ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು. ಅಭಿಮಾನಿಗಳು, ಸೆಲೆಬ್ರಿಟಿಗಳು ಮತ್ತು ಸ್ನೇಹಿತರು ನವ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಇನ್ನು ಕೊರೊನಾ ಕಾರಣದಿಂದ ಸಂಭಂದಿಕರಿಗೆ ಮತ್ತು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ.