ಮುಂಬೈ, ಜ 26 (DaijiworldNews/KP): ಇಂದು ದೇಶದೆಲ್ಲೆಡೆ ಸಂಭ್ರಮದಿಂದ ಗಣರಾಜ್ಯೋತ್ಸವ ಆಚರಿಸುತ್ತಿದ್ದಾರೆ, ಅಂತೆಯೇ ಬಾಲಿವುಡ್ ಖ್ಯಾತ ನಟಿ ಕರೀನಾ ಕಪೂರ್ ತಮ್ಮ ಮೊದಲ ಮಗ ತೈಮೂರ್ ಗಣರಾಜ್ಯೋತ್ಸವ ದಿನಾಚರಣೆಗೆ ಶುಭಕೋರಿದ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಮೊದಲ ಪುತ್ರ ತೈಮೂರ್ ತನ್ನದೇ ಆದ ವಿಧಾನದಲ್ಲಿ ಗಣರಾಜ್ಯೋತ್ಸವ ಆಚರಿಸಿದ್ದು. ಕಿತ್ತಳೆ, ಸೇಬು ಹಾಗೂ ಕಿವಿ ಹಣ್ಣುಗಳಿಂದ ಭಾರತದ ತ್ರಿವರ್ಣ ಧ್ವಜವನ್ನು ರಚಿಸಲು ಪ್ರಯತ್ನಿಸಿದ್ದಾನೆ.
ತೈಮೂರ್ ರಚಿಸಿದ ಧ್ವಜವನ್ನು ಕರೀನಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ‘ಟಿಮ್ (ತೈಮೂರ್) ರಚಿಸಿದ ತ್ರಿವರ್ಣದ ಬ್ರೇಕ್ಫಾಸ್ಟ್’ ಎಂದು ಬರೆದು ಚಿತ್ರವನ್ನು ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನು ಕರೀನಾ ಹಂಚಿಕೊಂಡಿರುವ ಈ ಚಿತ್ರ ಇದೀಗ ವೈರಲ್ ಆಗಿದ್ದು, ಅಭಿಮಾನಿಗಳ ತಮ್ಮ ಖಾತೆಗಳಲ್ಲಿ ಮರುಹಂಚಿಕೆಕೊಂಡಿದ್ದಾರೆ.