ಮಂಗಳೂರು, ಜ 24 (DaijiworldNews/MS): ಲಾಕ್ಡೌನ್ ಹಾಗೂ ಕೋವಿಡ್ ಸಾಂಕ್ರಮಿಕ ಕಾಲಘಟ್ಟದಲ್ಲಿ ಬಾಲಿವುಡ್ ನಂತ ಸಿನಿಮಾ ಇಂಡಸ್ಟ್ರಿಯಲ್ಲಿ ಚಿತ್ರ ತೆರೆ ಮೇಲೆ ತರಲು ಲೆಕ್ಕಾಚಾರ ಹಾಕುವ ಸಂದರ್ಭ, ನಮ್ಮ ತುಳುನಾಡಿನ ಕೋಸ್ಟಲ್ ವುಡ್ ಇಂಡಸ್ಟ್ರಿಯ ತುಳು ಸಿನಿಮಾವೊಂದು ತೆರೆಕಂಡು ಯಶಸ್ವಿಯಾಗಿ 25 ದಿನ ಪೂರೈಸಿ ಮುನ್ನುಗುತ್ತಿದೆ.
ಪಿಬಿಪಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣದವಾದ "ಸೋಡಾ ಶರ್ಬತ್ " ಲಾಕ್ ಡೌನ್ , ಮೂರನೇ ಅಲೆಯ ಭೀತಿಯ ನಡುವೆಯೂ ಪ್ರೇಕ್ಷಕರನ್ನು ಸೆಳೆಯುತ್ತಿರುವ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ಡಿ.31 ರಂದು ಬಿಡುಗಡೆಯಾದ ಹಾಸ್ಯದ ರಸದೌತಣ ಇರುವ ಸಿನಿಮಾ ಬಿಡುಗಡೆಯಾಗಿ 25 ದಿನ ಪ್ರದರ್ಶನ ಕಾಣುತ್ತಿದ್ದು, ಸಿನಿಮಾ ನೋಡಲು ಚಿತ್ರಪ್ರೇಮಿಗಳು ಥಿಯೇಟರ್'ನತ್ತ ಮುಗಿಬೀಳುತ್ತಿದ್ದಾರೆ.
ಪ್ರದೀಪ್ ಅವರ ನಿರ್ದೇಶದನದ ಸೋಡಾ ಶರ್ಬತ್ ಚಿತ್ರದಲ್ಲಿ ತುಳುನಾಡ ಮಾಣಿಕ್ಯ ಖ್ಯಾತಿಯ ಅರವಿಂದ ಬೋಳಾರ್, ಖ್ಯಾತ ಹಾಸ್ಯ ನಟ ಭೋಜರಾಜ್ ವಾಮಂಜೂರು, ತೆಲಿಕೆದ ಬೊಳ್ಳಿ ಖ್ಯಾತಿಯ ದೇವದಾಸ್ ಕಾಪಿಕಾಡ್, ಉಮೇಶ್ ಮಿಜಾರ್, ಪ್ರಸನ್ನ ಬೈಲೂರು ಕೊಂಕಣಿಯ ಖ್ಯಾತ ನಟ ಮೆಲ್ಲು ವೆಲೆನ್ಸಿಯಾ, ಪ್ರೈವೆಟ್ ಚಾಲೆಂಜ್ ಖ್ಯಾತಿಯ ವಾಲ್ಟರ್ ನಂದಳಿಕೆ, ಲವೀನಾ ಫೆರ್ನಾಂಡಿಸ್, ರಂಜಿತಾ ಸೇರಿದಂತೆ ಅನೇಕ ಮಂದಿ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಗಣೇಶ್ ನೀರ್ಚಾಲ್ ಈ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ. ಛಾಯಾಗ್ರಾಹಕರಾಗಿ ಯುವ ಪ್ರತಿಭೆ ಸಂತೋಷ್ ಕೆಲಸ ಮಾಡಿದ್ದಾರೆ. ಪ್ಯಾಟ್ಸನ್ ಪಿರೇರಾ ಮಂಗಳೂರು ಸಂಗೀತ ನಿರ್ದೇಶನ ಮಾಡಿದ್ದಾರೆ. ತ್ಯಾಗರಾಜ್ ಮತ್ತು ನೀತು ನೀನಾದ್ ಈ ಚಿತ್ರದ ಹಿನ್ನೆಲೆ ಗಾಯಕರಾಗಿದ್ದಾರೆ. ಮೆಲ್ವಿನ್ ಎಲ್ಪೆಲ್ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಹಾಗೂ ಪ್ಯಾಟ್ಸನ್ ಪೆರೀರಾ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸಂಕಲನವನ್ನು ಗಣೇಶ್ ನೀರ್ಚಾಲ್ ಮಾಡಿದ್ದಾರೆ.
'ಏಕ್ ಅಸ್ಲ್ಯಾರ್ ಏಕ್ ನಾ' ಎಂಬ ಕೊಂಕಣಿ ಚಲನಚಿತ್ರವನ್ನು ನಿರ್ದೇಶಿಸುವ ಮೂಲಕ ಹೆಸರುಗಳಿಸಿದ್ದ ನಿರ್ದೇಶಕ ಪ್ರದೀಪ್, ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದಾರೆ. ಲ್ಯಾನ್ಸಿ ಡಿ ಸೋಜಾ, ಡೈನಿ ಡಿ ಸೋಜಾ ಪಾಂಬೂರು, ಪೌಲ್ ಡಿ ಸೋಜಾ ಪಾಲಡ್ಕ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.
ಸಿನಿಮಾದಲ್ಲಿ ಎರಡು ಹಾಡುಗಳಿದ್ದು, ಇಂಡಿಯನ್ ಐಡಲ್ ಖ್ಯಾತಿಯ ನಿಹಾಲ್ ತೌರೊ, ದೇವದಾಸ್ ಕಾಪಿಕಾಡ್ ಮತ್ತು ಭೋಜರಾಜ್ ವಾಮಂಜೂರ್ ಅವರ ಸ್ವರವಿದೆ. ಉಮೇಶ್ ಮಿಜಾರ್ ಮತ್ತು ಅಭಿಷೇಕ್ ಶೆಟ್ಟಿ ಸಾಹಿತ್ಯ ಬರೆದಿದ್ದಾರೆ.