ಮುಂಬೈ,ಜ 23 (DaijiworldNews/KP):ಖ್ಯಾತ ಬಾಲಿವುಡ್ ನಟಿ ಮಲೈಕಾ ಅರೋರಾ ಮೊದಲಿನಿಂದಲೂ ತಮ್ಮ ಡ್ರೆಸ್ ಕಾರಣದಿಂದ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗುತ್ತಲೇ ಬಂದಿದ್ದು, ತಾನು ಯಾವ ರೀತಿಯ ಬಟ್ಟೆ ಹಾಕಬೇಕು ಎಂಬುದನ್ನು ಬೇರೆಯವರಿಂದ ತಿಳಿದುಕೊಳ್ಳಬೇಕಾಗಿಲ್ಲ ಎಂದು ಟ್ರೋಲ್ ಖಡಕ್ ಉತ್ತರ ನೀಡಿದ್ದಾರೆ.
ಮಲೈಕಾ ಐಟಂ ಡಾನ್ಸರ್, ನಟಿಯಾಗಿ ಸಾಕಷ್ಟು ಹೆಸರು ಗಳಿಸಿದದ್ದು, ಸದ್ಯ ಯಾವುದೇ ಸಿನಿಮಾಗಳಲ್ಲೂ ನಟಿಸುತ್ತಿಲ್ಲ, ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಸಕ್ರಿಯರಾಗಿದ್ದಾರೆ.
ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ತಾನು ಟೀಕೆಗೆ ಒಳಗಾಗುವ ಬಗ್ಗೆ ಮುಕ್ತವಾಗಿ ಮಾತನಾಡಿರುವ ಮಲೈಕಾ, ತಾನು ಮೂರ್ಖಳಲ್ಲ, ಡ್ರೆಸ್ಸಿಂಗ್ ವೈಯಕ್ತಿಕ ಆಯ್ಕೆಯಾಗಿದ್ದು, ಅವರವರು ಧರಿಸಿದ್ದ ಬಟ್ಟೆಯಲ್ಲಿ ಅವರು ಆರಾಮದಾಯಕವಾಗಿರುತ್ತಾರೆ. ಆದರೆ ಇತರರಿಗೆ ಯಾಕೆ ಕಷ್ಟವಾಗುತ್ತದೆ ಎಂದಿದ್ದಾರೆ.
ಇನ್ನು ಸಮಾಜವು ಮಹಿಳೆ ಧರಿಸುವ ಬಟ್ಟೆಯ ಆಧಾರದಲ್ಲಿ ಅಳೆಯುತ್ತದೆ. ಆದರೆ ನನಗೆ ಯಾವುದು ಚೆನ್ನಾಗಿ ಕಾಣುತ್ತದೆ, ಯಾವುದು ಕಾಣುವುದಿಲ್ಲ, ಅದು ಬೇಕೋ ಬೇಡವೋ ಎನ್ನುವುದು ನನ್ನ ಆಯ್ಕೆಯಾಗಿದೆ ಹೊರತು ಬೇರೆಯವರ ಒತ್ತಾಯದ ಮಣಿದು ನಾನು ಬಟ್ಟೆ ಧರಿಸುವುಷ್ಟು ದಡ್ಡಿ ನಾನಲ್ಲ. ನನಗೆ ಹೇಳುವ ಹಕ್ಕು ಯಾರಿಗೂ ಇಲ್ಲ ಎಂದು ಮಲೈಕಾ ಟ್ರೋಲಿಗರಿಗೆ ಖಾರವಾಗಿ ಉತ್ತರಿಸಿದ್ದಾರೆ.