ಚೆನೈ ಜ 20 (DaijiworldNews/KP): 2004ರ ನವೆಂಬರ್ 18ರಂದು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಈ ಜೋಡಿ. ಸುದೀರ್ಘ 18 ವರ್ಷಗಳ ಕಾಲ ದಾಂಪತ್ಯ ನಡೆಸಿದ ಧನುಷ್ ಮತ್ತು ಐಶ್ವರ್ಯಾ 2 ದಿನಗಳ ಹಿಂದೆಯಷ್ಟೇ ಜಂಟಿಯಾಗಿ ವಿಚ್ಛೇದನ ಘೋಷಿಸಿ ಮೂಲಕ ಸಿನಿ ಪ್ರೇಮಿಗಳಿಗೆ ಹಾಗೂ ಅಭಿಮಾನಿಗಳಿಗೆ ಶಾಕ್ ನೀಡಿತ್ತು.
ಈ ದಂಪತಿಗಳ ಪ್ರೀತಿಗೆ ಸಾಕ್ಷಿಯಾಗಿ ಇಬ್ಬರು ಮಕ್ಕಳಿದ್ದಾರೆ, 10 ವರ್ಷಗಳ ಹಿಂದೆ ತೆರೆ ಕಂಡ ಧನುಷ್ ನಟನೆಯ ‘3’ ಚಿತ್ರವನ್ನು ಐಶ್ವರ್ಯಾ ರಜನಿಕಾಂತ್ ಅವರೇ ನಿರ್ದೇಶನ ಮಾಡಿದ್ದರು. ಈ ಚಿತ್ರ ತೆರೆ ಕಂಡ ನಂತರದಲ್ಲಿ ಇಬ್ಬರೂ ಬೇರೆ ಆಗುತ್ತಾರೆ ಎನ್ನುವ ವದಂತಿ ಹಬ್ಬಿಕೊಂಡಿತ್ತು.
ಆದರೆ ಸಿನಿಮಾ ತೆರೆಕಂಡು ಸುಮಾರು 10 ವರ್ಷಗಳ ನಂತರ ಇವರಿಬ್ಬರೂ ಬೇರೆಯಾಗಲು ನಿರ್ಧಾರ ಮಾಡಿದ್ದಾರೆ, ಕೆಲಸದ ವಿಷಯವಾಗಿ ಹೈದರಾಬಾದ್ನಲ್ಲಿದ್ದ ಧನುಷ್ ಮತ್ತು ಐಶ್ವರ್ಯಾ ನಡುವೆ ದೊಡ್ಡ ಮಟ್ಟದಲ್ಲಿ ಜಗಳ ನಡೆದಿತ್ತು ಎಂಬ ಗಾಸಿಪ್ ಹರಿದಾಡುತ್ತಿದೆ. ಕೆಲವು ಮೂಲಗಳ ಪ್ರಕಾರ ಇಬ್ಬರ ನಡುವೆ ಹಲವು ವರ್ಷಗಳಿಂದ ಕಿತ್ತಾಟ ನಡೆಯುತಿತ್ತು ಎಂದು ಮಾತು ಕೇಳಿ ಬರುತಿದೆ.